ಬಂಟ್ವಾಳ :ಯುವಜನ ವ್ಯಾಯಾಮ ಶಾಲೆ ಭಂಡಾರಿಬೆಟ್ಟು ಬಿ ಮೂಡ ಇದರ 50ನೇ ವರ್ಷಚಾರಣೆಯ ಸುವರ್ಣ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆದಿತ್ಯವಾರ ಪದಾಧಿಕಾರಿಗಳು ಹಾಗೂ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರು ಜಗದೀಶ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು.. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಸಂಸ್ಕೃತ ಉಪನ್ಯಾಸಕರು ಪರಮೇಶ್ವರ್ ಹೆಗ್ಡೆ ರಾಮನಾಮ ತಾರಕ ಜಪದ ಮಹತ್ವ ತಿಳಿಸಿದರು.
ಸುವರ್ಣ ಸಂಭ್ರಮ ಜನವರಿ 24 ಮತ್ತು 25 ರಂದು ನಡೆಯಲಿದೆ.. 24 ಶನಿವಾರ ಬೆಳಿಗ್ಗೆ 39ನೇ ಸಾಮೂಹಿಕ ಸತ್ಯನಾರಾಯಣ ಪೂಜೆ, ಮದ್ಯಾಹ್ನ ಅನ್ನಸಂತರ್ಪಣೆ, ಮದ್ಯಾಹ್ನ ದ ನಂತರ ಅಂಗನವಾಡಿ ಕೇಂದ್ರದ ಶಾಲಾದಿನಾಚರಣೆ ಸಭಾ ಕಾರ್ಯಕ್ರಮ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಸಂಜೆ ಮೈಸೂರು ರಾಮಚಂದ್ರಾಚಾರ್ ರವರಿಂದ ಹರಿನಾಮ ಸಂಕೀರ್ತನೆ ನಡೆಯಲಿದೆ..
25 ರಂದು ಭಾನುವಾರ ಬೆಳಿಗ್ಗೆ ವಾಯುಸ್ತುತಿ ಸಮೇತ ಶ್ರೀ ರಾಮ ನಾಮ ತಾರಕ ಜಪ ಯಜ್ಞ ನಡೆಯಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ಸುವರ್ಣ ಮಹೋತ್ಸವ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಜೋಡು ಜೀಟಿಗೆ ತುಳು
ನಾಟಕ ನಡೆಯಲಿದೆ..
ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಜಯಪ್ರಕಾಶ್, ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ನಾರಾಯಣ ಮೂಲ್ಯ, ಯುವರಾಜ್ ಆಚಾರ್ಯ, ಯಶವಂತ, ರೋ. ಕಿಶೋರ್ ಕುಮಾರ್ ಎಸ್, ರಘುನಾಥ್ ಸಾಲ್ಯಾನ್, ಹೆನ್ರಿ ಪಿರೇರಾ, ಕೊರಗಪ್ಪ,ಶಂಕರ ಪಿ ಪ್ರಧಾನ ಕಾರ್ಯದರ್ಶಿ ಸುನಿಲ್. ಕೆ, ಕೋಶಾಧಿಕಾರಿ ಮಂಜುನಾಥ್ ಪೈ, ಸ್ಥಳೀಯ ಸಂಘ ಸಂಸ್ಥೆ ಅಧ್ಯಕ್ಷರುಗಳಾದ ಬಾಲಕೃಷ್ಣ ಕೊಟ್ಟಾರಿ, ಸಂತೋಷ್ ಮೈರಾನ್ ಪಾದೆ, ತುಳಸಿ ಆರ್, ಶರ್ಮಿಳಾ ಜೆ ಪೂಜಾರಿ, ಸುವರ್ಣ ಮಹೇಶ್, ರೂಪ ವಿಶ್ವನಾಥ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಭಂಡಾರಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು















