ಬಂಟ್ವಾಳ: ಕಸಬಾ ಗ್ರಾಮದ ನೆರಂಭೋಳ್ ಎಂಬಲ್ಲಿ ರಕ್ತೇಶ್ವರಿ ಯುವಕ ಸಂಘದ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮ ವನ್ನು ಉದ್ಯಮಿ ಸುಧಾಕರ ಆಚಾರ್ಯ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗಣೇಶ್ ಪೂಜಾರಿ ವಹಿಸಿದ್ದರು ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಸಕರಾದ ರಾಜೇಶ್ ನಾಯಕ್ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯುವ ವಾಹಿನಿಯ ಅಧ್ಯಕ್ಷರಾದ ನಾಗೇಶ್ ನೈಬೈಲು ನಾರಾಯಣ ಮೂಲ್ಯ ನೇರಂಬೋಳು ನರಿ ಕೊಂಬು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಉಷಾ ರಮನಾಥ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡುವ ನೋಣು ಪೂಜಾರಿ ಹಾಗೂ ನೋಣಯ್ಯ ಪೂಜಾರಿ ಕಂಬಲ ಕ್ಷೇತ್ರದಲ್ಲಿ ಸೇವೆ ಮಾಡುವ
ಕೊರಗಪ್ಪ ಮೂಲ್ಯ ಮಣಿ ಹಳ್ಳ ಆರೋಗ್ಯ ಕ್ಷೇತ್ರದಲ್ಲಿ ಅಂಬುಲೆನ್ಸ್ ಚಾಲಕರಾಗಿ ಸೇವೆ ಮಾಡುವ ಚಂದ್ರಶೇಖರ ದೈವ ಗುಡ್ಡೆ ಇವರುಗಳನ್ನು ಸನ್ಮಾನಿಸಲಾಯಿತು
ಈ ಸಂದರ್ಭ ಸಂಘದ ಗೌರವಾಧ್ಯಕ್ಷರಾದ ಹರಿಶ್ಚಂದ್ರ ಪೂಜಾರಿ ಕಾರ್ಯದರ್ಶಿ ಯಶೋಧರ ಪೂಜಾರಿ ಗೌರವ ಸಲಹೆಗಾರರಾದ ಚಂದ್ರಹಾಸ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ರವೀಂದ್ರ ನೇರಂಬೋಳು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿರೋಧಾವಳಿಗಳು ಹಾಗೂ ಭದ್ರ ಕಲಾವಿದರು ಇವರ ಅಭಿನಯದ ನಾಲಯಿ ಮಗುರುಜಿ ನಾಟಕ ಪ್ರದರ್ಶನವಾಯಿತು.















