ಬಂಟ್ವಾಳ :ಪ್ರತಿಷ್ಠಿತ ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ (ರಿ) ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ 36ವಾರ್ಷಿಕೋತ್ಸವದ ಪ್ರಯುಕ್ತ ವಾರ್ಷಿಕ ಕ್ರೀಡಾಕೂಟವು ಏ.2ರಂದು ಆದಿತ್ಯವಾರ ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಅಶ್ವಥಕಟ್ಟೆಯಲ್ಲಿ ದೀಪ ಬೆಳಗಿಸುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














