Coastal Bulletin

ಮಂಗಳೂರು :ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮೇ.14 ರಿಂದ 24ರವರೆಗೆ ನಡೆಯಲಿದೆ. ಈ‌ ಕಾರ್ಯಕ್ರಮದ ಅಂಗವಾಗಿ ಮಾ.24 ರಿಂದ ಆರಂಭಗೊಂಡಿರುವ ಸಂಧ್ಯಾ ಭಜನಾ ಸಂಕೀರ್ತಣೆ ಮೇ.14 ರವರೆಗೆ 48 ದಿನಗಳ ಕಾಲ‌ ನಡೆಯಲಿದೆ.

ಮೊದಲ ದಿನದ ಸಂಧ್ಯಾ ಭಜನಾ ಸಂಕೀರ್ತಣೆಯು ಶ್ರೀಮತಿ ಮಂಜುಳಾ ಪ್ರಭಾಕರ್ ರಾವ್ ಉರ್ವ ರವರ ತಂಡದಿಂದ ನಡೆಯಿತು. ಒಟ್ಟು 96 ಭಜನಾ ತಂಡಗಳು ಭಾಗವಹಿಸಲಿದ್ದಾರೆ.

ಸಂಧ್ಯಾ ಭಜನಾ ಸಂಕೀರ್ತಣೆಯನ್ನು ದೀಪ ಬೆಳಗಿಸಿ

ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ದಾಮೋದರ .ಎ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಬಿ. ಪ್ರೇಮಾನಂದ ಕುಲಾಲ್ ಕೋಡಿಕಲ್, ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment