ಕಶೆಕೋಡಿ: ಫೆ.3-7 ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜಾತ್ರಾ ಮಹೋತ್ಸವ, ಬ್ರಹ್ಮರಥೋತ್ಸವ.

Coastal Bulletin
ಕಶೆಕೋಡಿ: ಫೆ.3-7 ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜಾತ್ರಾ ಮಹೋತ್ಸವ, ಬ್ರಹ್ಮರಥೋತ್ಸವ.

ಬಂಟ್ವಾಳ: ಕುಡಾಳ್ ದೇಶಸ್ಥ ಅಧ್ಯಗೌಡ್ ಬ್ರಾಹ್ಮಣ ಸಮಾಜ ಅರಾಧಿಸಿಕೊಂಡು ಬರುತ್ತಿರುವ, ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈಧಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.3ರಿಂದ 7 ರವರೆಗೆ ನಡೆಯಲಿದೆ ಎಂದು ದೇವಳದ ಆಡಳಿತ ಮೊಕೇಸರ ಸುಧಾಕರ ಶೆಣೈ ಮರೋಳಿ ತಿಳಿಸಿದ್ದಾರೆ.

ಶುಕ್ರವಾರ ಬಿ ಸಿ ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದೇವಸ್ಥಾನ ಕುಡಾಳ್ ದೇಶಸ್ಥ ಅಧ್ಯಗೌಡ್ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದರೂ, ಸಮಸ್ತ ಹಿಂದೂ ಸಮಾಜದ ಕೂಡುವಿಕೆಯಲ್ಲಿ ಇಲ್ಲಿನ ಜಾತ್ರಾ ಮಹೋತ್ಸವ ಸಹಿತ ಇತರ ದೇವತಾ ಕಾರ್ಯಕ್ರಮ ನಡೆಯುತ್ತದೆ ಎಂದರು.

ಜಾತ್ರಾಮಹೋತ್ಸವದ ಪ್ರಯುಕ್ತ ಫೆ.3ರಂದು ಬೆಳಿಗ್ಗೆ ವೈದಿಕ ವಿಧಿ ವಿಧಾನಗಳ ಧ್ವಜಾರೋಹಣ, ಮಹಾಪೂಜೆ, ಸಂಜೆ ಭಜನೆ, ರಾತ್ರಿಪಲ್ಲಕಿ ಉತ್ಸವ ದೇವರ ಸವಾರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯುವ ಕಲಾವರ್ಧಿನಿ ಪ್ರಶಸ್ತಿ ವಿಜೇತೆ ಧನುಶ್ರೀ ಪ್ರಭು ಮತ್ತುತಂಡದಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿದೆ.

ಫೆ.4ರಂದು ಬೆಳಿಗ್ಗೆ ವೈಧಿಕ ವಿಧಿ ವಿಧಾನ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ರಾತ್ರಿ ದೇವರ ಬಲಿ, ಕಟ್ಟೆಪೂಜೆ, ರಾತ್ರಿ ಮಂಗಳೂರು ಸನಾತನ ನಾಟ್ಯಾಲಯದಿಂದ ರಾಷ್ಟ್ರ ಮತ್ತು ಧರ್ಮಜಾಗೃತಿಯ ನೃತ್ಯ ವೈಭವ ನಡೆಯಲಿದೆ ಎಂದರು.

ಫೆ.5ರಂದು ಬೆಳಿಗ್ಗೆ ವೈದಿಕ ವಿಧಿ ವಿಧಾನ ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ ರಾತ್ರಿ ದೇವರ ಬಲಿ, ಲಾಲಕಿ ಉತ್ಸವ, ನೃತ್ಯ ಬಲಿ

ವಸಂತಕಟ್ಟೆ ಪೂಜೆ ನಡೆಯಲಿದೆ ಎಂದರು.

ಫೆ. 6ರಂದು ಬೆಳಿಗ್ಗೆ ವೈಧಿಕ ವಿಧಿ ವಿಧಾನ, ದೇವರ ಬಲಿ ಉತ್ಸವ, ದರ್ಶನ ಬಲಿ, ರಥಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ರಾತ್ರಿ ಶ್ರೀಭೂತ ಬಲಿ, ಬ್ರಹ್ಮರಥರೋಹಣ, ಸುಡುಮದ್ದು ಪ್ರದರ್ಶನ, ಬ್ರಹ್ಮರಥೋತ್ಸವ ನಡೆಯಲಿದೆ.

ಫೆ. 7ರಂದು ಬೆಳಿಗ್ಗೆ ಕವಾಟ ಉದ್ಘಾಟನೆ, ಆರಾಟ ಬಲಿ, ಓಕುಳಿ,ಅವಕೃತ ಸ್ನಾನ, ರಾಜಾಂಗಣ ಪ್ರಸಾದ, ಧ್ವಜ ಅವರೋಹಣ ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ ರಾತ್ರಿ ಕ್ಷೇತ್ರದ ದೈಗಳಿಗೆ ನೇಮೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವದ ಪ್ರತಿದಿನ ಅನ್ನಸಂತರ್ಪಣೆಯು ಇರುವುದು ಎಂದರು.

ಈಗಾಗಲೇ ದೇವಸ್ಥಾನದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ.ರಥೋತ್ಸವಕ್ಕಾಗಿ ಮೂಲ ದೇವರಿಗೆ ಕಾಣುವ ರೀತಿಯಲ್ಲಿ ವಿಶಾಲವಾದ ರಥಬೀದಿಯನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಪುಷ್ಕರಣಿ, ಮುಂಭಾಗದ ಗೋಪುರ, ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ಪಾಕಶಾಲೆ ಮೊದಲಾದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಯೋಜನೆ ರೂಪಿಸಲಾಗಿದ್ದು, ಇದನ್ನು ಹಂತಹಂತವಾಗಿ ಪೂರೈಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಟ್ರಸ್ಟಿ ಶಾಂತರಾಮ ಶೆಣೈ, ಅಡಳಿತ ಮೊತ್ತೇಸರರಾದ ರಾಜೀವ್ ಡಿ.ಎಸ್.ವೆಂಕಟ್ರಾಯ ಶೆಣೈ, ಡಾ.ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

Leave a Comment