ಬಿ ಸಿ ರೋಡ್: ಫೆ.3ರಂದು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಹಾಗೂ ಜವಾಹರ್ ಬಾಲ್‌ ಮಂಚ್ ಅಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ

Coastal Bulletin
ಬಿ ಸಿ ರೋಡ್: ಫೆ.3ರಂದು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಹಾಗೂ ಜವಾಹರ್ ಬಾಲ್‌ ಮಂಚ್ ಅಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ

ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ ಬಾಳ್ತಿಲ ಮತ್ತು ಜವಾಹರ್ ಬಾಲ್‌ ಮಂಚ್ ದ.ಕ.ಇದರ ಜಂಟಿ ಆಶ್ರಯದಲ್ಲಿ 'ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ'ಕಾರ್ಯಕ್ರಮವು ಫೆ.3ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕಿ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಶೈಲಜಾ ರಾಜೇಶ್ ತಿಳಿಸಿದ್ದಾರೆ.

ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಸಮಾರಂಭವನ್ನು ಉದ್ಘಾಟಿಸಲಿದ್ದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಈ ಸಂಭ್ರಮೋತ್ಸವದಲ್ಲಿ ವಿವಿಧ ಜಿಲ್ಲಾ ಮಟ್ಟದ ಸ್ಪಧೆಗಳು ನಡೆಯಲಿದೆ.ಮುದ್ದುಕೃಷ್ಣ, ಮೆಹಂದಿ, ಬೆಂಕಿ ಬಳಸದೆ ಅಡುಗೆ, ಚಿತ್ರಕಲೆ, ನೃತ್ಯ ಸ್ಪರ್ಧೆ, ಮಹಿಳೆಯರಿಗೆ ಸ್ವಾದಿಷ್ಟ ಸವಿರುಚಿ ವಿಶೇಷ ಸ್ಪರ್ಧೆ ನಡೆಯಲಿದೆ.

 'ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಮಹಿಳೆಯ ಶಕ್ತಿಯಾಗಿ ಮೂಡಿಬಂದ ದಿ.ಇಂದಿರಾ ಗಾಂಧಿ" ಸಂವಾದ ಕಾರ್ಯಕ್ರಮ, ಸಮಾಜದಲ್ಲಿ ಮಕ್ಕಳು ಮತ್ತು ಮಹಿಳೆಯರ ಪಾತ್ರ :' ಕಾನೂನು ಸುವ್ಯವಸ್ಥೆ ಕುಟುಂಬ ಪ್ರೀತಿ -ಸಂಸ್ಕಾರ ಮಹತ್ವ ಮತ್ತು ಮಾಧಕ ವ್ಯಸನ ಮುಕ್ತ

ಭಾರತ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಮಂಡನೆ ನಡೆಯಲಿದೆ. ಕ್ಯಾನ್ಸರ್ ಪೀಡಿತ ವಿಕಲ ಚೇತನರು ಮತ್ತ ಅಸಕ್ತರಿಗೆ ಸಹಾಯಧನ ವಿತರಣೆ ನಡೆಯಲಿದೆ. ಸಂಸ್ಥೆಯಿಂದ ಸಾಧಕ ಐವರು ಮಹಿಳೆಯರಿಗೆ ಮಹಿಳೆಯರಿಗೆ 'ಗಿರಿಜಾ ರತ್ನ ರಾಜ್ಯ ಪ್ರಶಸ್ತಿ' ಪ್ರದಾನ ಮಾಡಲಾಗುವುದು,ಜವಾಹರ್ ಬಾಲ್ ಮಂಚ್ ವತಿಯಿಂದ ಕಳೆದ ವರ್ಷ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಐವರು ಬಾಲ ಪ್ರತಿಭೆಗಳನ್ನು ಅಭಿನಂದಿಸಲಾಗುವುದು, ಅಂದು ಬೆಳಿಗ್ಗೆ 6 ಗಂಟೆಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ನಡೆಯಲಿದೆ ಎಂದು ಶೈಲಜಾ ರಾಜೇಶ್ ಹೇಳಿದರು. 

ಸಂಸ್ಥೆಯ ಟ್ರಸ್ಟಿ ಡಾ. ರಾಜೇಶ್ ಪೂಜಾರಿ, ಸದಸ್ಯೆಯರುಗಳಾದ ಸುಜಾತ ದಿನೇಶ್, ಸರೋಜಿನಿ ಮಾರಪ್ಪ ಪೂಜಾರಿ, ಸುಲತಾ ಬಂಟ್ವಾಳ ಉಪಸ್ಥಿತರಿದ್ದರು.

Leave a Comment