ಮಂಗಳೂರು: ಶ್ರೀ ರಾಮ ಸೇನಾ ಉರ್ವಸ್ಟೋರ್ ಇದರ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಧಾರ್ಮಿಕ - ಸಾಮಾಜಿಕ - ಸಾಂಸ್ಕೃತಿಕ ಕಾರ್ಯಕ್ರಮವು ಜ.29ರಂದು ರವಿವಾರ ಉರ್ವಸ್ಟೋರ್ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಟೆಲ್ ಶ್ರೀ ಕೃಷ್ಣ ವಿಲಾಸ ಇದರ ಮಾಲಕ ಜಯಪ್ರಕಾಶ್ ರಾವ್ ವಹಿಸಿದ್ದರು. ಅತಿಥಿಗಳಾಗಿ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ, ಸತ್ಯಜಿತ್ ಸುರತ್ಕಲ್, ಅರುಣ್ ಕುಮಾರ್ ಪು, ಪ್ರವೀಣ್ ವಾಲ್ಕೆ ಮಂಗಳೂರು, ಮಧುಕರ ಮುದ್ರಾಡಿ, ಶಿವಕುಮಾರ್ ಕರ್ಚೆ, ದಿನಕರ ಶೆಟ್ಟಿ ವಕೀಲರು - ಮಂಗಳೂರು ಅಧ್ಯಕ್ಷರು, ಆರ್ಯಸಮಾಜ, ಮಯೂರು ಕೀರ್ತಿ ವಕೀಲರು-ಮಂಗಳೂರು, ಕಮಲಾಕ್ಷ
ಬಜಿಲಕೇರಿ, ತುಳು ರಂಗಭೂಮಿ ನಿರ್ದೇಶಕ ವಿಜಯ್ ಕುಮಾರ್ ಕೋಡಿಯಾಲ್ ಬೈಲ್, ಶ್ರೀ ರಾಮ ಸೇನೆಯ ಮಧುಸೂಧನ ಉರ್ವಸ್ಟೋರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 400 ಸ್ಥಳೀಯ ಉರ್ವಸ್ಟೋರ್ ಪರಿಸರದ ಕುಟುಂಬಗಳಿಗೆ ಅಕ್ಕಿ ವಿತರಣೆ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯಕುಮಾರ್ ಕೋಡಿಯಾಲ್ ಬೈಲ್ ನಿರ್ದೇಶನದ ಶಿವದೂತ ಗುಳಿಗ ತುಳು ನಾಟಕ ಪ್ರದರ್ಶನಗಗೊಂಡು ಜನ ಮೆಚ್ಚುಗೆ ಗಳಿಸಿತು.














