Coastal Bulletin

ಉಡುಪಿ: ಕಾಲೇಜಿಗೆ ಬರಲು ಇಚ್ಛಿಸುವವರು ಹಿಜಾಬ್ ತೆಗೆದು ಬರಲಿ. ಹಿಜಾಬ್ ಧರಿಸಿಯೇ ಕಾಲೇಜಗೆ ಬರುಬೇಕು ಎನ್ನುವವರು ಕಾಲೇಜಿಗೆ‌ ಬರುವುದು‌ ಬೇಡ ಎಂದಿದ್ದಾರೆ‌ ಶಾಸಕ ಕೆ.ರಘುಪತಿ ಭಟ್ .

ಸರಕಾರಿ ಬಾಲಕಿಯರ ಪದವಿ ಕಾಲೇಜಿನಲ್ಲಿ ಹಿಜಾಬ್ ವಿಷಯವಾಗಿ ನಡೆದ ಘಟನೆಯ ಕುರಿತಾಗಿ ಕಾಲೇಜು ಆಡಳಿತ,ಪೋಷಕರು ಮತ್ತು ಉಪನ್ಯಾಸಕರು ಸೇರಿ ಸಭೆ ನಡೆಸಿ,ಸುದ್ದಿಗಾರರ ಜೊತೆ ಮಾತನಾಡಿದ್ದಾರೆ.

ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದೇ ರೀತಿ ಶಾಲಾ ಸಮಿತಿ ನಡೆದುಕೊಳ್ಳುತ್ತದೆ.

ಅಲ್ಲದೇ ಕಾಂಪೌಂಡ್ ತನಕ ಹಿಜಾಬ್ ಧರಿಸಿ, ನಂತರ ಅದನ್ನು ತೆಗೆದು ತರಗತಿಗೆ ಹಾಜರಾಗುವುದು ಬರಬೇಕು ಎಂದರು.

ಈ ವಿಷಯವನ್ನು‌ ಬೇಗನೇ ನಿರ್ಧರಿಸುವುದು ಉತ್ತಮ, ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಮಕ್ಕಳ‌ ಪೋಷಕರು ಹೇಳುತ್ತಿದ್ದಾರೆ ಎಂದು ಶಾಸಕರು ಹೇಳಿದರು.

Leave a Comment