Coastal Bulletin

ಬಂಟ್ವಾಳ : ಆರಾದನಾ ಫ್ರೆಂಡ್ಸ್ ಸರ್ಕಲ್ ಗಾಣದಪಡ್ಪು ಬಿ.ಸಿ.ರೋಡ್ ಇದರ 34ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಬಿ.ಸಿ.ರೋಡ್ ನ ಹಿರಿಯ ನಾಟಿ ವೈದ್ಯೆ ಮೀನಾಕ್ಷಿ ನಾರಾಯಣ ಆಚಾರ್ಯ ಇವರಿಗೆ "ಆರಾದನಾ ಪ್ರಶಸ್ತಿ-2022" ನ್ನು‌ಪ್ರದಾನ ಮಾಡಲಾಯಿತು.‌

ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ‌ ನಡೆದ ಸರಳ ಸಮಾರಂಭದಲ್ಲಿ ಹನುಮಗಿರಿ ಮೇಳದ ಕಲಾವಿದ  ಡೀಕಯ್ಯ ನೇಪಥ್ಯ  ಹಾಗೂ ಕಳೆದ 20-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 580 ಅಂಕ ಗಳಿಸಿದ ಮನೀಷ್ ಮಯ್ಯರಬೈಲು ರವರನ್ನು ಸನ್ಮಾನಿಸಲಾಯಿತು.

ಈ‌

ಸಂದರ್ಭದಲ್ಲಿ ಪುರಸಭಾ ಸದಸ್ಯ ಹರಿಪ್ರಸಾದ್, ಉದ್ಯಮಿ ಅಶೋಕ್ ಕುಮಾರ್ ನ್ಯಾಯವಾದಿ ನಾರಾಯಣ ಸೋಮಯಾಜಿ, ಗಣಪತಿ ಸೋಮಯಾಜಿ, ನಿವೃತ್ತ ಶಿಕ್ಷಕರಾದ ಮೀನಾಕ್ಷಿ, ಪರಮೇಶ್ವರ ಹೆಗಡೆ ಉಪಸ್ಥಿತರಿದ್ದರು. ಬಳಿಕ ಹನುಮಗಿರಿ ಮೇಳದಿಂದ ಯಕ್ಷಗಾನ ಬಯಲಾಟ‌ ನಡೆಯಿತು.

Leave a Comment