ಕುಂದಾಪುರ: ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬಂದಾಗ ಪ್ರಾಂಶುಪಾಲರು ಅವರನ್ನು ತಡೆದಿರುವ ಘಟನೆ ಇಂದು ನಡೆದಿದೆ.
ಕಾಲೇಜಿನ ಗೇಟಿನಲ್ಲಿ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ನಡುವೆ ಮಾತುಕತೆ ನಡೆಯಿತು. ಪ್ರಾಂಶುಪಾಲರು ಹಿಜಾಬ್ ತೆಗೆದು ತರಗತಿಗೆ ಹಾಜರಾಗಿ ಎಂದು ಹೇಳಿದರು .ಆದರೆ ವಿದ್ಯಾರ್ಥಿಗಳು ಒಪ್ಪದೆ, ನಾವು ಮೊದಲಿನಿಂದಲೂ ಹಿಜಾಬ್ ಹಾಕಿಯೇ ತರಗತಿಗೆ ಬರುತ್ತಿದ್ದೇವು. ಹಿಂದೂ ವಿದ್ಯಾರ್ಥಿಗಳು ಸಹ ಕೇಸರಿ ಶಾಲು ಹಾಕಿ ಬರಲಿ .ಅಲ್ಲದೇ ಸರ್ಕಾರದ ಆದೇಶದಲ್ಲಿ ಕುಂದಾಪುರರ ಕಾಲೇಜಿನ ಹೆಸರಿಲ್ಲ, ಒಂದು ವೇಳೆ ಹೆಸರು ಇರುತ್ತಿದ್ದರೆ, ನಾವು
ಹಿಜಾಬ್ ತೆಗೆಯುತ್ತಿದ್ದೇವು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಅದಕ್ಕೆ ಖಡಕ್ ಆಗಿ ಉತ್ತರಿಸಿದ ಪ್ರಾಂಶುಪಾಲರು, ಪ್ರತಿಯೊಂದು ಕಾಲೇಜಿಗೂ ಆದೇಶ ನೀಡಲಾಗುವುದಿಲ್ಲ. ಸರ್ಕಾರ ಈಗಾಗಲೇ ಇಡೀ ಕಾಲೇಜಿಗೆ ಸುತ್ತೋಲೆ ಹೊರಡಿಸಿದೆ.ಅದನ್ನು ಪಾಲಿಸುವುದು ಪ್ರತಿಯೊಂದು ಕಾಲೇಜಿನ ಧರ್ಮ ಎಂದಿದ್ದಾರೆ.
ಇದರ ಬಗ್ಗೆ ಮಾತನಾಡಿದ ಉಡುಪಿ ಉಸ್ತುವಾರಿ ಸಚಿವ ಎಸ್.ಅಂಗಾರ , ಈ ಬಗ್ಗೆ ಜಿಲ್ಲಾಡಳಿತದ ಜೊತೆ ಸರ್ಕಾರ ಚರ್ಚಿಸಿ ಸೂಕ್ತ ನಿರ್ಧಾರ ಮಾಡುವುದು ಉತ್ತಮ ಎಂದರು.














