ಬಂಟ್ವಾಳ:ಇಲ್ಲಿನ ಅಮ್ಟಾಡಿ ಗ್ರಾಮದ ಕಲಾಯಿ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ದೇವರ ಬಿಂಬ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ದೇವಳದ ತಂತ್ರಿ ಉದಯ ಪಾಂಗಣ್ಣಾಯ ಇವರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಪೂಜಾ ಕಾರ್ಯಕ್ರಮ ಸಹಿತ ಭಜನೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಅ. 28 ಬುಧವಾರ ನಡೆಯಿತು. ನಡೆಯಿತು.
ದೇವಳದ ಆಡಳಿತ ಮೊಕ್ತೇಸರ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಬಡಾಜೆ ರವಿಶಂಕರ್ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ವಕೀಲ ಅಶ್ವನಿ ಕುಮಾರ್ ರೈ,
ಪುರಸಭಾ ಸದಸ್ಯ ಜಗದೀಶ ಕುಂದರ್, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಆಧ್ಯಕ್ಷ ಕರುಣೇಂದ್ರ ಪೂಜಾರಿ, ಬಿ.ಸಿ.ರೋಡು
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಸತೀಶ ಭಂಡಾರಿ, ಶ್ರೀ ಚಂಡಿಕಾಪರಮೇಶ್ವರಿ ದೇವಳದ ಅಧ್ಯಕ್ಷ ಲೋಕನಾಥ ಶೆಟ್ಟಿ, ಅರಳ ಕ್ಷೇತ್ರದ ಟ್ರಸ್ಟಿ ಜಗದೀಶ ಆಳ್ವ ಅಗ್ಗೊಂಡೆ, ಪ್ರಮುಖರಾದ ಸುಬ್ಬಯ್ಯ ಶೆಟ್ಟಿ ಬಾರ್ಲ, ನರಸಿಂಹ ಹೊಳ್ಳ, ಲೋಕೇಶ ಕಾಯರ್ ಮಾರ್, ಕೇಶವ ನಾಯ್ಕ್, ರಂಜನ್ ಕುಮಾರ್ ಶೆಟ್ಟಿ, ನವೀನ್ ಕೋಟ್ಯಾನ್ ಬಿ.ಸಿ.ರೋಡು ಮತ್ತಿತರರು ಇದ್ದರು.














