Coastal Bulletin

ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಯುವಕರ ಸಂಘ ದೇವಂದಬೆಟ್ಟು,ಇದರ 36ನೇ ವಾರ್ಷಿಕೋತ್ಸವದ ಪ್ರಯುಕ್ತ ಆಲ್ ಕಾರ್ಗೋ ಲಾರ್ಜ್ ಸ್ಟಿಕ್(ಅ ) ಮಂಗಳೂರು ಹಾಗೂ ಪ್ರಜ್ಞಾ ಸಲಹಾ ಕೇಂದ್ರ ಮಂಗಳೂರು ಇದರ ಸಹಯೋಗದಲ್ಲಿ, ಎ.ಜೆ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಮಹಾವಿದ್ಯಾಲಯ ಕುಂಟಿಕಾನ ಮಂಗಳೂರು ಇದರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ದಂತ ತಪಾಸಣಾ ಶಿಬಿರವು ಜ 29ರಂದು ಆದಿತ್ಯವಾರ ಸರಕಾರಿ ಶಾಲೆ ಬ್ರಹ್ಮರ ಕೋಟ್ಲು ಇಲ್ಲಿ ನಡೆಯಿತು.

ಆರೋಗ್ಯ ಶಿಬಿರವನ್ನು ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶೋದ ಜಾರಂದಗುಡ್ಡೆ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಜೆಸಿಐ ಬಂಟ್ವಾಳದ ನಿಕಟ ಪೂರ್ವ ಅಧ್ಯಕ್ಷರಾದ ರೋಷನ್ ರೈ ಪಚ್ಚಿ ನಡ್ಕ,ಗ್ರಾ ಪಂ ಸದಸ್ಯರಾದ ಪುರುಷೋತ್ತಮ್ ಕೊಟ್ಟಾರಿ ಮಾಡಂಗೆ, ರವಿರಾಜ್ ಮಾಡಂಗೆ, ಪದ್ಮನಾಭರಾವ್ ಕನಪಾಡಿ, ಮೂಕಾಂಬಿಕಾ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಶಶಿಧರ್ ಬ್ರಹ್ಮರಕೊಟ್ಲು ,ಮಾಜಿ ಎಪಿಎಂಸಿ ಸದಸ್ಯರಾದ ದಿವಾಕರ್ ಪಂಬದಬೆಟ್ಟು, ಮಾಜಿ ತಾಲೂಕು ಪಂಚಾಯತ್ ಸದಸ್ಯ ಶಿವಪ್ರಸಾದ್ ಕನಪಾಡಿ,ಸಂಘದ ಅಧ್ಯಕ್ಷರಾದ ಜಗದೀಶ್

ಕಂಜತ್ತೂರ್, ವೈದ್ಯಾಧಿಕಾರಿ ಗಳಾದ ನವೀನ್ ಮಂಗಳೂರು ಹಾಗೂ ಶರತ್ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ ರಮಾನಾಥ ರೈ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಶಿಬಿರಕ್ಕೆ ಭೇಟಿ ಕೊಟ್ಟರು. ಸಂಘದ ಕಾರ್ಯದರ್ಶಿ ಮನೋಜ್ ಕನಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ಪ್ರಶಾಂತ್ ಕುಲಾಲ್ ಧನ್ಯವಾದವಿತ್ತರು.

ಸುಮಾರು 200 ಜನರು ಈ ಆರೋಗ್ಯ ಶಿಬಿರದ ಸದುಪಯೋಗ ಪಡೆದರು, 60 ಜನರಿಗೆ ಉಚಿತ ಕನ್ನಡಕವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು

Leave a Comment