Coastal Bulletin

ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ(ರಿ) ಮಯ್ಯರಬೈಲು ಇದರ 43 ನೇ ವಾರ್ಷಿಕ ಮಹಾಸಭೆ ಸಂಧರ್ಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಿಧ್ಯಾರ್ಥಿ ವೇತನ ವಿತರಣೆ, ಹಾಗೂ ಕುಲಾಲ ಪ್ರತಿಭೆಗಳ ನ್ರತ್ಯ ಅನ್ವೇಷನೆಯ ಡ್ಯಾನ್ಸ್ ಕುಲಾಲ್ ಡ್ಯಾನ್ಸ್ 2022 ಕಾರ್ಯಕ್ರಮವು ಸೆಪ್ಟೆಂಬರ್25 ಆದಿತ್ಯವಾರ ಬಿ.ಸಿ.ರೋಡು ಪೊಸಳ್ಳಿ ಕುಲಾಲ ಭವನದಲ್ಲಿ ವಿಶೇಷವಾಗಿ ನಡೆಯಿತು.

ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಡ್ಯಾನ್ಸ್ ಸ್ಪರ್ಧೆಯನ್ನು ಸಂಘದ ಉಪಾಧ್ಯಕ್ಷರಾದ ಸುಂದರ್ ಬಿ, ದೀಪ ಪ್ರಜ್ವಲಿಸಿ ಕುಲಾಲ ಸಮಾಜದ ಪ್ರತಿಭೆಗಳಿಗೆ ಅವಕಾಶ ನೀಡುವ ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು. 

ಸಂಘದ ಅಧ್ಯಕ್ಷ ನಾರಾಯಣ ಸಿ.ಪೆರ್ಣೆ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಲಾಲ್ ಅಗ್ರಬೈಲು,ಮತ್ತು ಪಧಾದಿಕಾರಿಗಳು, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸುಶೀಲಾ ಲಿಂಗಪ್ಪ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷರಾದ ನಾರಾಯಣ ಸಿ,ಪೆರ್ಣೆ ವಹಿಸಿದ್ದರು.

ಮುಂಬಾಯಿ ಕುಲಾಲ ಸಂಘದ ಕಟ್ಟಡ ಸಮಿತಿ ಉಪಾಧ್ಯಕ್ಷರಾದ ಸುನೀಲ್ ರಾಜು ಸಾಲ್ಯಾನ್ ಪ್ರತಿಭಾ ಪುರಸ್ಕಾರ ನೀಡಿ ಸಮುದಾಯದ ಸಂಘದ ಮೇಲೆ ಅಭಿಮಾನ ನಮ್ಮ ಮನವಾಗಬೇಕು, ವಿಧ್ಯಾರ್ಥಿಗಳು ಕಲಿತು ಉತ್ತಮ ಉದ್ಯೋಗ ಪಡೆದು ಸಮಾಜಕ್ಕೆ ಶಕ್ತಿಯಾಗಬೇಕು ಎಂದು ಹಾರೈಸಿ ಬಂಟ್ವಾಳ ಕುಲಾಲ ಸಮುದಾಯ ಭವನದ ಮೇಲಂತಸ್ತಿನ ಸಭಾಂಗಣದ ನಿರ್ಮಾಣಕ್ಕೆ 50 ಸಾವಿರ ರೂಪಾಯಿ ಮುಂಗಡವಾಗಿ ನೀಡಿ ಮುಂದಿನ ಸಹಕಾರದ ಭರವಸೆಯನ್ನು ನೀಡಿದರು.

ವಿಧ್ಯಾರ್ಥಿ ವೇತನ ವಿತರಿಸಿ ಮಾತಾನಾಡಿದ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತ್ರ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಬಂಟ್ವಾಳ ಕುಲಾಲ ಸಂಘ ಸೌಭಾಗ್ಯದ ಸಂಘಟನೆ, ಕನಸುಗಳನ್ನು ನನಸಾಗಿಸೋ ಚಿಂತನೆ, ಮಕ್ಕಳನ್ನು ಬೆಸೆಯೋ ಯೋಚನೆ, ಕ್ರಿಯಾಶೀಲ ಯೋಜನೆ ಈ ಸಂಘಕ್ಕಿದೆ ಎಂದು ಶುಭಹಾರೈಸಿದರು.

ಬೆಂಗಳೂರಿನ ಉದ್ಯಮಿ ಶ್ರೀ ಧಾಮ ರಬ್ಬರ್ಸ್ ನ ಮಾಲಕ ಕೇಶವ ಬಾಳೆಹಿತ್ಲು, ಬಂಟ್ವಾಳ ತಾಲೂಕು ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶೇಷಪ್ಪ ಮಾಸ್ಟರ್, ಮುಂಬಾಯಿ ಕುಲಾಲ ಸಂಘದ ಕೋಶಾದಿಕಾರಿ ಜಯ ಎಸ್,ಅಂಚನ್, ಬಂಟ್ವಾಳ ಕುಲಾಲ ಕುಂಬಾರ ಯುವ ವೇದಿಕೆಯ ಅಧ್ಯಕ್ಷ ಸಂತೋಷ್ ಮರ್ತಾಜೆ, ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ, ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ಲಿಂಗಪ್ಪ, ಕಟ್ಟಡ ಸಮಿತಿಯ ಗೌರವಾಧ್ಯಕ್ಷ ಕ್ರಷ್ಣಪ್ಪ ಬಿ, ಅಧ್ಯಕ್ಷ ಸುರೇಶ್ ಕುಮಾರ್ ನಾವೂರು, ದೇವಕಿ ಸುನೀಲ್ ಸಾಲ್ಯಾನ್,  ಮಾಲತಿ ಜಯ ಅಂಚನ್ ಉಪಸ್ಥಿತರಿದ್ದರು. 

ಇದೇ ಸಂಧರ್ಭದಲ್ಲಿ ಚೆನ್ನಪ್ಪ ಮೂಲ್ಯ ಅಂಗ್ರಿ ಕನ್ಯಾನ ಇವರ ಪತ್ನಿಯ ಅನಾರೋಗ್ಯಕ್ಕೆ ಆರೋಗ್ಯ ಧನ ಸಹಾಯ ನೀಡಲಾಯಿತು. ಸಂಘಟನಾ ಕಾರ್ಯದರ್ಶಿ ಸತೀಶ್ ಸಂಪಾಜೆ, ಮಚ್ಚೇಂದ್ರ ಸಾಲ್ಯಾನ್, ರಮೇಶ್ ಸಾಲ್ಯಾನ್, ಜಯಗಣೇಶ್ ಬಂಗೇರ, ಮಾಧವ ಕುಲಾಲ್ ವಿವಿಧ ಜವಾಬ್ದಾರಿ ನಿರ್ವಹಿಸಿದರು. 

ಪ್ರ.ಕಾರ್ಯದರ್ಶಿ ಲಕ್ಮಣ್ ಕುಲಾಲ್ ಅಗ್ರಬೈಲು ಸ್ವಾಗತಿಸಿ , ಕೋಶಾಧಿಕಾರಿ ಬಿ.ಸತೀಶ್ ಕುಲಾಲ್ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

ಕುಲಾಲ ಸಂಘದ ಕುಲಾಲ ಪ್ರಬುದ್ಧ ಕಲಾವಿದರಿಂದ "ನಟ್ಟುನಾಯೆ" ಗೀತಾಭಿನಯದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು , 43ನೇ ವರ್ಷದ ವಾರ್ಷಿಕ ಮಹಾಸಭೆಯ ನಡಾವಳಿ ನಡೆಯಿತು.

ಡ್ಯಾನ್ಸ್ ಕುಲಾಲ್ ಡ್ಯಾನ್ಸ್ -2022. ಸ್ಪರ್ಧಾ ಕಣಕ್ಕೆ 8 ತಂಡಗಳು ಭಾಗವಹಿಸಿದ್ದವು.

ಕುಲಾಲ ಸಂಘ ಮಾಣಿ ಚಿಂತಾಮಣಿ ಡ್ಯಾನ್ಸ್ ಗ್ರೂಪ್, ಕುಲಾಲ ಮಹಿಳಾ ಘಟಕ ಕೊಲ್ಯ, ದ.ಕ.ಜಿಲ್ಲಾ ಸೇವಾದಳ ಮಾತ್ರ ಸಂಘ ಘಟಕ, ಶಾರದಾ ನ್ರತ್ಯ ತಂಡ ವಗ್ಗಾ,ನಮನ ಕಲಾ ಬಳಗ ಬಂಟ್ವಾಳ,ಹಂಸಧ್ವನಿ ಕಲಾ ನಾಟ್ಯ ಸಂಘ ಮೆಲ್ಕಾರ್, ಕಾರುಣ್ಯ ಡ್ಯಾನ್ಸ್ ಗ್ರೂಪ್ ನೆಟ್ಲ, ನರಿಕೊಂಬು ಪ್ರೇರಣಾ ಮಹಿಳಾ ಸ್ವ ಸಹಾಯ ಸಂಘ. ಇದರಲ್ಲಿ ಪ್ರಥಮ: ಪ್ರೇರಣಾ ಮಹಿಳಾ ಸ್ವ ಸಹಾಯ ಸಂಘ ನರಿಕೊಂಬು. ದ್ವಿತೀಯ: ಕಾರುಣ್ಯ ಡ್ಯಾನ್ಸ್ ಗ್ರೂಪ್ ನೆಟ್ಲ. ತ್ರತೀಯ: ದ.ಕ. ಜಿಲ್ಲಾ ಸೇವಾದಳ ಮಾತ್ರ ಸಂಘ ಘಟಕ. ಬಹುಮಾನ ಪಡೆಯಿತು, ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರೋತ್ಸಾಹ ಧನ ನೀಡಲಾಯಿತು.

ಸ್ಪರ್ಧೆಯನ್ನು ನಾಗೇಶ್ ಬಾಳೆಹಿತ್ಲು ಮತ್ತು ಗಣೇಶ್ ಮರ್ಧೋಳಿ ಸಂಯೋಜಿಸಿದರು. ತೀರ್ಪುಗಾರರಾಗಿ ಕು! ಸೌಂದರ್ಯ ಕುಲಾಲ್ ಮೂಡಬಿದ್ರೆ, ಮತ್ತು ಕು! ಮೋಕ್ಷ ನೆತ್ತರಕೆರೆ ಸಹಕರಿಸಿದರು.

Leave a Comment