ಬಂಟ್ವಾಳ :ಫರಂಗಿಪೇಟೆಯ ಕಾಂತಪ್ಪ ಪೂಂಜಾ ಸಂಕೀರ್ಣ ಎದುರು ನಿಂತಿದ್ದ ಎರಡು ಕಾರುಗಳಿಗೆ ವೋಕ್ಸ್ ವೆಗಾನ್ ಕಾರು ಡಿಕ್ಕಿ ಹೊಡೆದಿದೆ.
ಬಿಸಿರೋಡ್ ಕಡೆಯಿಂದ ಅತಿ ವೇಗದಲ್ಲಿ ಧಾವಿಸಿ ಬಂದ ಕಾರು ಕಾಂತಪ್ಪ ಪೂಂಜಾ ಸಂಕೀರ್ಣ ದ ಎದುರುಗಡೆ ನಿಲ್ಲಿಸಿದ್ದ ಓಮ್ನಿ 800ಮತ್ತು ಮಾರುತಿ ಆಲ್ಟೊ ಕಾರು ಹಾಗು ರಿಪೇರಿಗೆ
ನಿಲ್ಲಿಸಿದ್ದ ಟಿಪ್ಪರ್ ಗೆ ಡಿಕ್ಕಿ ಯಾಗಿದೆ ಓಮ್ನಿ ಮತ್ತು ಟಿಪ್ಪರ್ ನಡುವೆ ಸಿಲಿಕಿದ ಮಾರುತಿ ಆಲ್ಟೊ ಕಾರು ನುಜ್ಜುಗುಜ್ಜಾಗಿದೆ.
ಬಂಟ್ವಾಳ ಟ್ರಾಫಿಕ್ ಪೊಲೀಸ್ ಯವರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ.













