ಕುಳಾಯಿ:ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘಕ್ಕೆ3ನೇ ಬಾರಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಸಾಧನಾ ಪುರಸ್ಕಾರ.

Coastal Bulletin
ಕುಳಾಯಿ:ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘಕ್ಕೆ3ನೇ ಬಾರಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಸಾಧನಾ ಪುರಸ್ಕಾರ.

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2024- 25 ನೇ ಸಾಲಿಗೆ ಸಹಕಾರಿ ಸಂಘಗಳ ಸರ್ವತೋಮುಖ ಅಭಿವೃದ್ಧಿಗೆ ಕೊಡ ಮಾಡುವ ಸಾಧನಾ ಪ್ರಶಸ್ತಿ 2024- 25 ನ್ನು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ (ನಿ ) ಚಕ್ರಸೌದ ಕುಳಾಯಿ ಪಡಕೊಂಡಿತು. ತನ್ಮೂಲಕ ಸತತ ಮೂರನೇ ಬಾರಿಗೆ ಪ್ರಶಸ್ತಿ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿತು.

ಸಹಕಾರಿ ಸಂಘ ದ ಅಧ್ಯಕ್ಷರಾದ ಶ್ರೀ ಮಯೂರ್ ಉಳ್ಳಾಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್, ಉಪಾಧ್ಯಕ್ಷರಾದ ಸುರೇಶ್ ಸಾಲಿಯಾನ್, ನಿರ್ದೇಶಕರಾದ ಶೇಖರ್  ಕುತ್ತಾರ್,

ಪ್ರದೀಪ ಅತ್ತಾವರ್, ಶ್ರೀಮತಿ ಬೇಬಿ, ಶ್ರೀಮತಿ ಪಾರ್ವತಿ, ಶ್ರೀ ಲಕ್ಷ್ಮಣ್ ಮೂಲ್ಯ, ಸಂದೀಪ್ ಪ್ರಸಾದ್, ಜೊತೆ ಕಾರ್ಯದರ್ಶಿ ರಮೇಶ ಕುಲಾಲ್ ಉಪಸ್ಥಿತರಿದ್ದರು.

Leave a Comment