ಬಂಟ್ವಾಳ: ಇಲ್ಲಿನ ಕಾರಣಿಕ ಪ್ರಸಿದ್ಧ ರಾಯರಚಾವಡಿ ಶ್ರೀ ನಾಗಬ್ರಹ್ಮ ಪಂಜುರ್ಲಿ ಪಿಲಿಚಾಮುಂಡಿ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ 'ಎಣ್ಣೆ ಬೂಲ್ಯ ಮತ್ತು ನೇಮೋತ್ಸವ ಶನಿವಾರ ಸಂಜೆ ನಡೆಯಿತು. ಇದೇ ವೇಳೆ ಕಳೆದ 25 ವರ್ಷಗಳಿಂದ ಇಲ್ಲಿನ ದೈವ ನರ್ತಕನಾಗಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮೇಶ ಪಂಬದ ಇವರನ್ನು ಸಮಿತಿ ಅಧ್ಯಕ್ಷ ಬಿ.ಯೋಗೀಶ್ ಸಪಲ್ಯ ಸನ್ಮಾನಿಸಿದರು.
ಇದೇ ವೇಳೆ ದೈವಗಳಿಗೆ ಬೆಳ್ಳಿ ಆಭರಣ ಸಮರ್ಪಿಸಲಾಯಿತು. ಅರ್ಚಕ ನರಸಿಂಹ ಮಯ್ಯ, ಗಣೇಶ ಮಯ್ಯ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಕೆ.ಸೇಸಪ್ಪ
ಕೋಟ್ಯಾನ್, ಪ್ರಮುಖರಾದ ಉದಯ ಕುಮಾರ್ ರಾವ್, ಭೋಜ ಮೂಲ್ಯ, ದೇವು ಗೌಡ, ಆನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಭೇಟಿ ನೀಡಿದರು.














