ಸುಜೀರು :ಅಮೃತ ಮಹೋತ್ಸವ ಹಾಗೂ ರುದ್ರಯಾಗದ ಪ್ರಯುಕ್ತ ಮಾತೃ ಸಂಗಮ ಕಾರ್ಯಕ್ರಮ ಮಾತೆಯರು ತಾಳ್ಮೆಯಿಂದ ಮಕ್ಕಳ ನಡವಳಿಕೆಯನ್ನು ಗಮನಿಸಿ :ವಿನುತಾ ಸಾಲೆತ್ತೂರು

Coastal Bulletin
ಸುಜೀರು :ಅಮೃತ ಮಹೋತ್ಸವ ಹಾಗೂ ರುದ್ರಯಾಗದ ಪ್ರಯುಕ್ತ ಮಾತೃ ಸಂಗಮ ಕಾರ್ಯಕ್ರಮ ಮಾತೆಯರು ತಾಳ್ಮೆಯಿಂದ ಮಕ್ಕಳ ನಡವಳಿಕೆಯನ್ನು ಗಮನಿಸಿ :ವಿನುತಾ ಸಾಲೆತ್ತೂರು

ಬಂಟ್ವಾಳ :ಮಾತೆಯರು ಸದಾ ತಾಳ್ಮೆಯಿಂದ ಮಕ್ಕಳ ನಡವಳಿಕೆಯ ಬಗ್ಗೆ ಸದಾ ಗಮನ ಹರಿಸಿಕೊಂಡು ಮಕ್ಕಳು ದಾರಿ ತಪ್ಪದಂತೆ ಎಚ್ಚರ ವಹಿಸಬೇಕು,ಸಂಸ್ಕಾರ ಹಾಗೂ ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮಲ್ಲಿರುವ ಸಂಸ್ಕಾರ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮಾತೆಯರು ಸುಸಂಸ್ಕೃತರಾದರೆ ಕುಟುಂಬದ ಉನ್ನತಿಯಾಗುತ್ತದೆ ಎಂದು ಮಂಗಳೂರು ವಿವಿ ಉಪನ್ಯಾಸಕಿ ವಿನುತ ಸಾಲೆತ್ತೂರು ಹೇಳಿದರು.

ಶ್ರೀ ರಾಮ ವೈದ್ಯನಾಥ ಭಜನಾ ಮಂದಿರ ಸುಜೀರು ಇದರ ಅಮೃತ ಮಹೋತ್ಸವದ ಏಕಹ ಭಜನೆ, ರುದ್ರಯಾಗದ ಪ್ರಯುಕ್ತ ಡಿ 29ರಂದು ಭಾನುವಾರ ಮಂದಿರದ ಆವರಣದಲ್ಲಿ ನಡೆದ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗೋವಿನತೋಟ ರಾಧಸುರಭಿ ಗೋ ಮಂದಿರದ ಅಧ್ಯಕ್ಷ ಭಕ್ತಿಭೂಷಣ್ ಪ್ರಭುಜಿ ಮಾತನಾಡಿ,ನಮ್ಮ ದೈನಂದಿನ ಆಹಾರ ಪದ್ದತಿ ಸರಿ ಇದ್ದಾಗ, ಆಯಾಯ ಋತುವಿಗೆ ಸರಿಯಾದ ಆಹಾರ ಸೇವನೆ ಮಾಡಿದಾಗ ಸಕಲ ರೋಗದಿಂದ ದೂರವಿರಬಹುದು ಸಂಸ್ಕಾರಯುತ ಜೀವನದಿಂದ ಸಮಾಜಮುಖಿಯಾಗಿ ಬದುಕಲು ಸಾಧ್ಯ ಎಂದು

ಹೇಳಿದರು.

ಅಮೃತ ಮಹೋತ್ಸವ ಸಮಿತಿ ಐತಪ್ಪ ಆಳ್ವ ಸುಜೀರುಗುತ್ತು, ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಭಜನಾ ಮಂದಿರದ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಗೌರವ ಸಲಹೆಗಾರ ಕಮಲಾಕ್ಷ ಗಂಧಗಾಡು, ಹಿರಿಯರಾದ ಜಾನಕಿ ಪದ್ಮನಾಭ, ಬಾಲಕೃಷ್ಣ ಗಾಂಭೀರ ಉಪಸ್ಥಿತರಿದ್ದರು.

ಯಶವಂತಿ ಕಿಶೋರ್ ಸ್ವಾಗತಿಸಿದರು, ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಕ್ಷ ಸಂತೋಷ್ ವಂದಿಸಿದರು. ವಿದ್ಯಾ ಶಿವರಾಜ್, ಹರ್ಷಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು ಸಹಕರಿಸಿದರು.

Leave a Comment