ಪಿ ಯು ಸಿ ವಿದ್ಯಾರ್ಥಿ ಸಾತ್ವಿಕ್‌ ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಗೆ ದಾಖಲು, ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗಲು ತಾಯಿಯ ಮನವಿ.

Coastal Bulletin
ಪಿ ಯು ಸಿ ವಿದ್ಯಾರ್ಥಿ ಸಾತ್ವಿಕ್‌ ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಗೆ ದಾಖಲು, ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗಲು ತಾಯಿಯ ಮನವಿ.

ಬಂಟ್ವಾಳ: ತಾಲೂಕಿನ ಬಿ. ಮೂಡ ಗ್ರಾಮದ ಅಜ್ಜಿಬೆಟ್ಡು ನಿವಾಸಿ ಹೇಮಾವತಿ ಮತ್ತು ಹರೀಶ್ ದಂಪತಿಗಳ ಮಗ ಸಾತ್ವಿಕ್ (೧೭) ಕಿಡ್ನಿ ವೈಫಲ್ಯದ ತೊಂದರೆಯಿಂದ ಅನಿರೀಕ್ಷಿತವಾಗಿ ಅನಾರೋಗ್ಯಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್‍ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದ್ವಿತೀಯ ಪಿಯುಸಿ ವ್ಯಾಸಂಗಕ್ಕೆ ಸಜ್ಜಾಗಬೇಕಿದ್ದ ಹುಡುಗ ಈಗ ಆಸ್ಪತ್ರೆಯಲ್ಲಿ ಮಲಗಿದ್ದಾರೆ.

ತನ್ನ ತಾಯಿಯೇ ಕಿಡ್ನಿ ನೀಡಲು ಮುಂದಾಗಿದ್ದು, ಶಸ್ತ್ರ ಚಿಕಿತ್ಸೆಗೆ ಸುಮಾರು ೧೦ ಲಕ್ಷಕ್ಕಿಂತಲೂ ಅಧಿಕ ಮೊತ್ತ ಅಗತ್ಯ ಇದೆ. ಇವರ ಕುಟುಂಬವು ಆರ್ಥಿಕವಾಗಿ ಬಡಕುಟುಂಬವಾಗಿದ್ದು, ತಂದೆ ಹೃದಯ ಸಂಬಂಧಿ ಅನಾರೋಗ್ಯಕ್ಕೆ ಒಳಗಾಗಿದ್ದು, ಅದರ ಔಷಧಿ ವೆಚ್ಚವನ್ನು ನಿಭಾಯಿಸುವುದರೊಂದಿಗೆ ಮನೆಯ ಇನ್ನಿತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಆರ್ಥಿಕ ಸಂಕಷ್ಟವಿದ್ದು, ಮಗನ ಅನಾರೋಗ್ಯ ಸ್ಥಿತಿಯನ್ನು ನಿಭಾಯಿಸಲು

ಸಾಧ್ಯವಾಗದೇ ದಿಕ್ಕು ತೋಚದಂತಾಗಿದ್ದಾರೆ. ಆದುದರಿಂದ ಸಹೃದಯಿ ಬಂಧುಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.


ಬ್ಯಾಂಕ್ ವಿವರ :

ಖಾತೆದಾರರ ಹೆಸರು : ಹರೀಶ್, ಬ್ಯಾಂಕ್ ಹೆಸರು : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಶಾಖೆ : ಬಂಟ್ವಾಳ, ಖಾತೆ ಸಂಖ್ಯೆ : ೫೨೦೧೦೧೦೭೦೩೨೧೮೫೬, ಐಎಫ್‌ಎಸ್‌ಸಿ - ಯುಬಿಐಎನ್೦೯೦೨೦೪೭, ಮೊಬೈಲ್ ಸಂಖ್ಯೆ : ೯೦೦೮೩೫೭೬೪೮, ೮೪೯೫೯೨೨೯೬೩

Leave a Comment