ಬಂಟ್ವಾಳ: ಈ ಬಾರಿಯ ಕರ್ನಾಟಕದ ವಿಧಾನಸಭಾ ಚುನಾವಣೆ ದೇಶದ ದಿಕ್ಕನ್ನು ಬದಲಿಸುವ ಚುನಾವಣೆಯಾಗಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ.ಈ ಕಾರಣದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹಾಗೂ ಶಾಸಕರಾಗಿ ಬಿ.ರಮಾನಾಥ ರೈ ಬಹುಮತದಿಂದ ಗೆದ್ದು ಬರಲಿದ್ದಾರೆ, ದೇಶದಲ್ಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಟ್ಯಾಬ್ಲೋ ವಿಚಾರ ಸೇರಿದಂತೆ ಪಠ್ಯದಲ್ಲಿ ಗುರುವರ್ಯರ ಸಂದೇಶ ತೆರವುಗೊಳಿಸುವ ಮೂಲಕ ಬಿಲ್ಲವರು ಮತ್ತು ಸಮಸ್ತ ಹಿಂದುಳಿದ ವರ್ಗ ಸಮುದಾಯಕ್ಕೆ ಬಿಜೆಪಿ ಸಕರ್ಾರ ಮಾಡಿರುವ ಅವಮಾನ ಜನತೆ ಮರೆತಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 'ಬಿಜೆಪಿ ಕೇವಲ ಭಾವನಾತ್ಮಕ ವಿಚಾರ ಮತ್ತು ಅಪಪ್ರಚಾರ ನಡೆಸುತ್ತಾ ಜನರನ್ನು ಮೋಸಗೊಳಿಸುತ್ತಿದೆ. ರಾಜ್ಯದಲ್ಲಿ ಕಮಿಷನ್ ದಂಧೆ ಮತ್ತು ಭ್ರಷ್ಟಾಚಾರದಿಂದ ಬೇಸತ್ತ ಜನತೆ ದಂಗೆ ಏಳುವ ಸ್ಥಿತಿಗೆ ತಲುಪಿದ್ದಾರೆ. ಕಾಂಗ್ರೆಸ್ನ ಎಲ್ಲಾ ಗ್ಯಾರಂಟಿ ಯೋಜನೆ ಪ್ರಥಮ ಕ್ಯಾಬಿನೆಟ್ನಲ್ಲೇ ಈಡೇರಿಸಲಿದೆ ಎಂದು ಅವರು ತಿಳಿಸಿದರು.
ಬಂಟ್ವಾಳ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯ ರೂವಾರಿ ಬಿ.ರಮಾನಾಥ ರೈ ಅವರ ಪ್ರಯತ್ನದಂತೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ
ಅವರು 'ಬ್ರಹ್ಮಶ್ರೀ ನಾರಾಯಣಗುರು ಜಯಂತಿ' ಸರ್ಕಾರಿ ಕಾರ್ಯಕ್ರಮ ಬಂಟ್ವಾಳದಲ್ಲೇ ಆರಂಭಿಸಿದ್ದರು ಎಂದರು. ಈ ಬಾರಿಯ ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪಿಯೂಸ್ ಎಲ್.ರಾಡ್ರಿಗಸ್, ಸುದೀಪ್ ಕುಮಾರ್ ಶೆಟ್ಟಿ, ಕೆ.ಸಂಜೀವ ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ, ಉಮೇಶ ಬೋಳಂತೂರು,ಕೆ.ಮಾಯಿಲಪ್ಪ ಸಾಲ್ಯಾನ್, ಜಗದೀಶ್ ಕೊಯಿಲ, ಜಯಂತಿ ಪೂಜಾರಿ, ಜೋಸ್ಫಿನ್ ಡಿಸೋಜ, ವಾಸು ಪೂಜಾರಿ, ಉಮೇಶ್ ಕುಲಾಲ್, ರಿಯಾಜ್ ಹುಸೇನ್, ತಿಮ್ಮಪ್ಪ ಪೂಜಾರಿ, ವಕೀಲ ಚಂದ್ರಶೇಖರ ಪೂಜಾರಿ, ಪರಮೇಶ್ವರ ಮೂಲ್ಯ, ವೆಂಕಪ್ಪ ಪೂಜಾರಿ, ಶಬೀರ್ ಸಿದ್ದಕಟ್ಟೆ ಮತ್ತಿತರರು ಇದ್ದರು.















