ಬಂಟ್ವಾಳ: ಸೇವಾ ಜಾಗರಣ ತುಂಬೆ ಹಾಗೂ ಹಿತೈಷಿಗಳ ಸಹಕಾರದಿಂದ ತುಂಬೆ ಗ್ರಾಮದ ಕುಚ್ಚಿಗುಡ್ಡೆ ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ಕಿರಣ್ ಕುಮಾರ್ ಹಾಗೂ ಪ್ರಿಯಾ ಅವರ ನೂತನ ಮನೆ ಶಕ್ತಿಯ ಗೃಹಪ್ರವೇಶ ಹಾಗೂ ಮನೆ ಹಸ್ತಾಂತರ ಕಾರ್ಯಕ್ರಮ ಶನಿವಾರ ನಡೆಯಿತು.
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಭಾರತ ಮಾತ ಪೂಜನಾ ನೆರವೇರಿಸಿ, ಸಭಾಕಾರ್ಯಕ್ರಮದಲ್ಲಿ ಮನೆಮಂದಿಗೆ ಕೀಲಿಕೈ ಹಸ್ತಾಂತರಿಸಿ ಆಶೀರ್ವಚನ ನೀಡಿ ಕಷ್ಟದಲ್ಲಿದ್ದವರ ಸೇವೆ ದೇವರ ಸೇವೆ, ನಮ್ಮ ಕೈಲಾದಷ್ಟು ಸಮಾಜದ ಬಂಧುಗಳ ಸೇವೆ ಮಾಡೋಣ. ಮತ್ತೊಬ್ಬರಿಗಾಗಿ ಬದುಕಿದಾಗ ಜೀವನಕ್ಕೆ ಅರ್ಥ ಬರುತ್ತದೆ ಎಂದರು.
ಆರ್‌ಎಸ್‌ಎಸ್ ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಮಾತನಾಡಿ ಮನೆಯ ಮಾಲೀಕ ಕಿರಣ್ ಸಮಾಜದ ಹಿತಕ್ಕಾಗಿ ಸಹಕಾರ ನೀಡಿದವರು, ದುರದೃಷ್ಟವಶಾತ್ ಅವರು ಅನಾರೋಗ್ಯಕ್ಕೀಡಾದರು, ಹಿಂಜಾವೇ ಅವರ ಜೊತೆಗಿದ್ದು ಮನೆ ನಿರ್ಮಾಣದ ಕನಸನ್ನು ನನಸಾಗಿಸಿದೆ. ಇದೊಂದು ಮತ್ತೊಬ್ಬ ಕಾರ್ಯಕರ್ತಗೆ ಪ್ರೇರಣೆ ನೀಡುವ ಕಾರ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ಪ್ರಮುಖರಾದ ಸತ್ಯಜಿತ್ ಸುರತ್ಕಲ್, ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ, ತೇವು ತಾರಾನಾಥ ಕೊಟ್ಟಾರಿ, ಬಂಟ್ವಾಳ ತಾಲೂಕು ಬಿಲ್ಲವ
ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ತಾ.ಪಂ ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ಕಳ್ಳಿಗೆ ಗ್ರಾ.ಪಂ. ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಹಿಂಜಾವೇ ಜಿಲ್ಲಾ ಸಂಚಾಲಕ ಜಗದೀಶ್ ನೆತ್ತರಕೆರೆ, ಬಂಟ್ವಾಳ ತಾಲೂಕು ಸಂಚಾಲಕ ತಿರುಲೇಶ್ ಬೆಳ್ಳೂರು, ಆಶೀರ್ವಾದ ಸೇವಾ ಸಂಘದ ಮಹಿಳಾ ಸಮಿತಿ ಅಧ್ಯಕ್ಷೆ ಲಕ್ಷ್ಮಿ, ವಿಜಯ ಕಜಕಂಡ ಉಪಸ್ಥಿತರಿದ್ದರು. ಮನೆ ನಿರ್ಮಾಣಕ್ಕೆ ವಿಶೇಷ ನೆರವು ನೀಡಿದ ಪುರುಷೋತ್ತಮ ಕೊಟ್ಟಾರಿ, ಉಮೇಶ್ ಕನಪಾಡಿ, ಸೋಮಶೇಖರ್ ಪರ್ಲಕೆ, ರವಿರಾಜ್ ರಾಮಲಕಟ್ಟೆ, ವಿಜಯ್ ಹಾಗೂ ಯೋಗೀಶ್, ಅವರನ್ನು ಸನ್ಮಾನಿಸಲಾಯಿತು. ಆರ್ಥಿಕ ಸಹಕರಾ ನೀಡಿದ ಮಹನಿಯರನ್ನು ಗೌರವಿಸಲಾಯಿತು.
ಜಗದೀಶ್ ಕಡೆಗೋಳಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು, ಸಂತೋಷ್ ತುಂಬೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸುಶಾನ್ ಆಚಾರ್ಯ ಸಹಕರಿಸಿದರು. ಗೃಹಪ್ರವೇಶದ ಹಿನ್ನಲೆಯಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.















