ಕುಮ್ಡೇಲ್:ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ದೈವಸ್ಥಾನ. ಬ್ರಹ್ಮಕಲಶ ಸಮಿತಿಯ ಅಭಿನಂದನೆ ಹಾಗೂ ಲೆಕ್ಕ ಪತ್ರ ಮಂಡನೆ ಸಭೆ.

Coastal Bulletin
ಕುಮ್ಡೇಲ್:ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ದೈವಸ್ಥಾನ. ಬ್ರಹ್ಮಕಲಶ ಸಮಿತಿಯ ಅಭಿನಂದನೆ ಹಾಗೂ ಲೆಕ್ಕ ಪತ್ರ ಮಂಡನೆ ಸಭೆ.

ಬಂಟ್ವಾಳ :ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ದೈವಸ್ಥಾನ ಕುಮ್ಡೇಲ್ ಪುದು-ತುಂಬೆ ಇದರ ಬ್ರಹ್ಮ ಕಲಶ ಸಮಿತಿಯ ಅಭಿನಂದನೆ ಹಾಗೂ ಲೆಕ್ಕ ಪತ್ರ ಮಂಡನೆ ಸಭೆ ಜು. 27ರಂದು ಆದಿತ್ಯವಾರ ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಭಾಸ್ಕರ ಚೌಟ ಕುಮ್ಡೇಲ್, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಉಮೇಶ್ ಸಾಲ್ಯಾನ್ ಬೆಂಜನಪದವು, ಗೌರವಾಧ್ಯಕ್ಷ ಪ್ರಕಾಶ್ ಚಂದ್ರರೈ ದೇವಸ್ಯ, ಉಮೇಶ್ ಶೆಟ್ಟಿ ಬರ್ಕೆ,ಗುರಿಕಾರ ವೆಂಕಪ್ಪ ಕುಮ್ಡೇಲ್,ಭಂಡಾರ ಮನೆಯ ದೇವದಾಸ್ ಕುಮ್ಡೇಲ್, ಮಹಿಳಾ ಸಮಿತಿ ಸಂಚಾಲಕಿ ಜಯಶ್ರೀ ಕರ್ಕೇರ ಮೇರಮಜಲು, ಪ್ರಧಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ , ಪ್ರಮುಖರಾದ ಕೃಷ್ಣ ಭಂಡಾರಿ ಪೆಲಪಾಡಿ, ಪ್ರಕಾಶ್ ಶೆಟ್ಟಿ ತುಂಬೆ , ಪದ್ಮನಾಭ

ಶೆಟ್ಟಿ ಪುಂಚಮೆ, ಗಣೇಶ್ ಸುವರ್ಣ ತುಂಬೆ,ರಾಘವ ಬಂಗೇರ ಪೇರ್ಲಬೈಲ್, ಕೋಶಾಧಿಕಾರಿ ಹರಿಕೃಷ್ಣ ಪಂಡಿತ್ ಉಪಸ್ಥಿತರಿದ್ದರು.

ಉಮೇಶ್ ಶೆಟ್ಟಿ ಬರ್ಕೆ ಸ್ವಾಗತ ಪ್ರಸ್ತಾವನೆ ಮಾಡಿ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದರು. ಅಧ್ಯಕ್ಷರಾದ ಉಮೇಶ್ ಸಾಲ್ಯಾನ್ ಬೆಂಜನಪದವು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು, ಆಡಳಿತ ಮೊಕ್ತೇಸರರಾದ ಭಾಸ್ಕರ ಚೌಟ ಕುಮ್ಡೇಲ್ ಸಮಸ್ತ ಭಕ್ತ ಸಮೂಹಕ್ಕೆ ಶ್ರೀ ದೈವಗಳ ಆಶೀರ್ವಾದ ಇರಲೆಂದು ಆಶಿಸಿದರು.ಹರಿಕೃಷ್ಣ ಪಂಡಿತ್ ಧನ್ಯವಾದವಿತ್ತು, ತಾರಾನಾಥ ಕೊಟ್ಟಾರಿ ಲೆಕ್ಕ ಪತ್ರ ಮಂಡನೆಯೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು

Leave a Comment