ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಸವಣೂರಿನ ಝಾಕೀರ್, ಬೆಳ್ಳಾರೆಯ ಶಫೀಕ್ ಬಂಧನ ಮಾಡಲಾಗಿದೆ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿದಿದ್ದಾರೆ.
ಆರೋಪಿಗಳ ಬಂಧನದ ಮೊದಲು ಸುಮಾರು 20ಕ್ಕೂ ಜನರನ್ನು ವಶಕ್ಕೆ ಪಡೆಯಲಾಗಿದೆ.ಮಾಹಿತಿಗಳ ಪ್ರಕಾರ ಇನ್ನೊಬ್ಬನಿಗಾಗಿ ಶೋಧ ಮಾಡಲಾಗುತ್ತಿದೆ.ಬಂಧಿತರನ್ನು ಕರ್ನಾಟಕ- ಕೇರಳ ಗಡಿ ಭಾಗದಲ್ಲಿ ಬಂಧಿಸಲಾಗಿದೆ ಎಂದು ಬೆಳ್ಳಾರೆಯ ಎಸ್ಪಿ ಮಾಹಿತಿ ನೀಡಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಗತ್ಯ ಬಿದ್ದರೆ ಉತ್ತರ ಪ್ರದೇಶ ಯೋಗಿ
ಸರಕಾರದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು,ಯೋಗಿ ಸರಕಾರವು ಆರೋಪಿಗಳ ಮನೆ ಮೇಲೆ ಬುಲ್ಡೋಜರ್ ಹತ್ತಿಸಿದಲ್ಲದೆ ಹಲವು ಎನ್ಕೌಂಟರ್ ಗಳನ್ನು ಮಾಡಿದೆ.
ಈವಾಗ ಆರೋಪಿಗಳನ್ನು ಬಂಧಿಸಲಾಗಿದೆ ಯೋಗಿ ಸರಕಾರದಂತೆ ಕರ್ನಾಟಕ ಸರಕಾರ ಈ ರೀತಿಯ ಕಾನೂನು ತಂದು ಶಾಶ್ವತ ಪರಿಹಾರ ಕಂಡುಕೊಳ್ಳವುದೇ ಅಥವಾ ಕೇವಲ ಮಾಧ್ಯಮ ಹೇಳಿಕೆಗೆ ಸೀಮಿತವಾಗಲಿದೆಯೇ ಎಂದು ಕಾದು ನೋಡಬೇಕಾಗಿದೆ.

















