Coastal Bulletin

ಜು 25 ರಿಂದ 27ರವರೆಗೆ ಮೂಡಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಆಯುಕ್ತರ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವು ಮಾನ್ಯ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ. ಆರ್ ಸಿಂಧ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮುಖ್ಯ ಆಯುಕ್ತರಾದ ಡಾ.ಎಂ ಮೋಹನ್ ಆಳ್ವ,ರಾಜ್ಯ ಸ್ಕೌಟ್ ಆಯುಕ್ತರಾದ ಎಂ ಎ ಖಾಲಿದ್,ರಾಜ್ಯ ಆಯುಕ್ತರು (ವಯಸ್ಕ ಸಂಪನ್ಮೂಲ) ಹಾಗೂ ತರಬೇತಿ ಶಿಬಿರದ ನಾಯಕರು ಚಿನ್ನಸ್ವಾಮಿ ರೆಡ್ಡಿ,ರಾಜ್ಯ ಗೈಡ್ ಆಯುಕ್ತರಾದ (ಪ್ರಭಾರ) ರಾಧಾ ವೆಂಕಟೇಶ್,ರಾಜ್ಯ ಕಾರ್ಯದರ್ಶಿ ಹಾಗೂ ಶಿಬಿರ ಸಹಾಯಕರು ಗಂಗಪ್ಪ ಗೌಡ,ರಾಜ್ಯ ಜಂಟಿ ಕಾರ್ಯದರ್ಶಿ ಬಿ ವಿ ರಾಮಲತ,ರಾಜ್ಯ ಸ್ಕೌಟ್ ಸಂಘಟನಾ ಆಯುಕ್ತರಾದ ಎಂ ಪ್ರಭಾಕರ್ ಭಟ್, ರಾಜ್ಯ

ಗೈಡ್ ಸಂಘಟನಾ ಆಯುಕ್ತರಾದ ಮಂಜುಳಾ,ರಾಜ್ಯ ಸ್ಕೌಟ್ ತರಬೇತಿ ಆಯುಕ್ತರಾದ ನಾಗೇಶ್ ಶಿವಪುರ್ ,ಜಿಲ್ಲಾ ಗೈಡ್ ಆಯುಕ್ತರಾದ (ಪ್ರಭಾರ) ಜಯವಂತಿ ಸೋನ್ಸ್,ಜಿಲ್ಲಾ ಕಾರ್ಯದರ್ಶಿ ಎಂ ಜಿ ಕಜೆ,ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್,ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತರಾದ ಪ್ರತೀಮ್ ಕುಮಾರ್,ಜಿಲ್ಲಾ ಗೈಡ್ ಆಯುಕ್ತರಾದ ಜಯಶ್ರೀ,ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ರವರು ಸಭೆಯಲ್ಲಿ ಉಪಸ್ಥಿತರಿದ್ದರು.

3 ದಿನದ ಶಿಬಿರದ ಅನುಭವವನ್ನು ಶಿಬಿರಾರ್ಥಿಗಳು ವ್ಯಕ್ತಪಡಿಸಿದರು.ಭಾಗವಹಿಸಿದ 123 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು

Leave a Comment