Coastal Bulletin

ಒಡಿಯೂರು : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ , ಶ್ರೀ ದತ್ತಾಂಜನೇಯ ಕ್ಷೇತ್ರ, ದಕ್ಷಿಣ ಗಾಣಗಾಪುರದ ವತಿಯಿಂದ ದಿನಾಂಕ 2-8-2022 ನೇ ಮಂಗಳವಾರ ಶ್ರೀ ಸಂಸ್ಥಾನಮ್ ನಲ್ಲಿ ನಾಗರ ಪಂಚಮಿ ಮಹೋತ್ಸವ , ಸಾರ್ವಜನಿಕ ಆಶ್ಲೇಷ ಬಲಿಪೂಜೆ ಜರಗಲಿದೆ.

ಕಾರ್ಯಕ್ರಮದ ಅಂಗವಾಗಿ, ಬೆಳಿಗ್ಗೆ 9 ಗಂಟೆಗೆ ಸ್ವಯಂಭೂ ನಾಗರಾಜ ಕಟ್ಟೆಯಲ್ಲಿ ಅಭಿಷೇಕ. ನಂತರ 10 ಗಂಟೆಯಿಂದ ಸಾರ್ವಜನಿಕ ಆಶ್ಲೇಷ ಬಲಿಪೂಜೆ ಆರಂಭ ಮತ್ತು ಪೂಜ್ಯ ಶ್ರೀಗಳವರಿಂದ

ನಾಗರ ಪಂಚಮಿಯ ಸಂದೇಶ. ಮಧ್ಯಾಹ್ನ 12.30 ಕ್ಕೆ ಸರಿಯಾಗಿ ಮಹಾಪೂಜೆ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ. 3 ಗಂಟೆಯ ಹೊತ್ತಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Leave a Comment