ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಫರಂಗಿಪೇಟೆಯ ಅಥಾಯಿ ಕಾಂಪ್ಲೆಕ್ಸ್ ನಲ್ಲಿ 'ಪ್ರಕೃತಿ" ಹೊಮಿಯೋಪತಿ ಕ್ಲಿನಿಕ್ ಮೇ 18ರಂದು ಸೋಮವಾರ ಶುಭಾರಂಭಗೊಂಡಿತು.
ಹಿರಿಯ ವೈದ್ಯರಾದ ಡಾ. ಗುರುಪ್ರಸಾದ್ ಎಂ ಎಸ್ ಹಾಗೂ ಡಾ ಪ್ರಸನ್ನ ಕುಮಾರ್ ಕೆ. ಕ್ಲಿನಿಕ್ ಉದ್ಘಾಟಿಸಿ ಶುಭ ಹಾರೈಸಿದರು.
ಸೇವೆಗಳು:
ಎಲ್ಲಾ ವಯಸ್ಸಿನವರಿಗೂ ಸಮಗ್ರ ಚಿಕಿತ್ಸೆ ಅಲ್ಪಕಾಲಿಕ ಹಾಗು ದೀರ್ಘಕಾಲಿಕ ಸಮಸ್ಯೆಗಳಿಗೆ ಪರಿಹಾರ.ಆನ್‌ಲೈನ್ ಸಮಾಲೋಚನೆಗಳಿಗೆ ಔಷಧಿಗಳನ್ನು ಕೊರಿಯರ್ ಮೂಲಕ ತಲುಪಿಸಲಾಗುತ್ತದೆ.
ಪ್ರತಿದಿನ ಬೆಳಿಗ್ಗೆ 10ರಿಂದ 1 ಹಾಗೂ ಸಂಜೆ 4ರಿಂದ 7ಗಂಟೆಯ ವರೆಗೆ ಸೇವೆ ಲಭ್ಯವಿದೆ ಎಂದು ಡಾ. ಕೃತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಮಿಯೋಪತಿ ಹಿನ್ನಲೆ:
ಹೋಮಿಯೋಪತಿ ಎಂಬ ವಿಶಿಷ್ಟವಾದ ವೈದ್ಯಕೀಯ ಪದ್ಧತಿಯನ್ನುಹೋಮಿಯೋಪತಿಯ ಪಿತಾಮಹರೆಂದು ಕರೆಯಲ್ಪಡುವ ಜರ್ಮನ್ ವೈದ್ಯ ಡಾ. ಸ್ಯಾಮುಯೆಲ್ ಹ್ಯಾನಿಮನ್ ಅವರು ೧೮ನೇ ಶತಮಾನದ ಅಂತ್ಯದಲ್ಲಿ ಕಂಡುಹಿಡಿದರು.
ಅಂದಿನ ವೈದ್ಯಕೀಯ ಪದ್ಧತಿಯ ಅಡ್ಡಪರಿಣಾಮಗಳು ಮತ್ತು ಪರಿಣಾಮಕಾರಿತ್ವದ ಕೊರತೆಯಿಂದ ಬೇಸತ್ತಿದ್ದ ಹ್ಯಾನಿಮನ್ ಅವರು ಈ ಹೊಸ ರೀತಿಯ ಚಿಕಿತ್ಸೆಯನ್ನು ಅನ್ವೇಷಿಸಲು ಪ್ರಾರಂಭಿಸಿದರು.
ಅವರ ವೈಜ್ಞಾನಿಕ ಸಂಶೋಧನೆ ಮತ್ತು ತತ್ವಗಳ ಆಧಾರದ ಮೇಲೆ ಹುಟ್ಟಿಕೊಂಡ ಹೋಮಿಯೋಪತಿ ಇಂದು ಜಗತ್ತಿನಾದ್ಯಂತ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿದೆ.
ಹೋಮಿಯೋಪತಿಯು ನೆಗಡಿ, ಕೆಮ್ಮು, ಜ್ವರ, ತಲೆನೋವು, ಹೊಟ್ಟೆನೋವು, ಅಜೀರ್ಣ, ಅತಿಸಾರ, ವಾಂತಿ,
ಚರ್ಮದ ಅಲರ್ಜಿಗಳು, ಹುಳುಕುಗಳಂತಹ ಸಾಮಾನ್ಯ ಕಾಯಿಲೆಗಳಿಗೂ; ಆಸ್ತಮಾ, ಅಲರ್ಜಿಕ್ ರೈನಿಟಿಸ್, ಸೈನುಟಿಸ್, ಎಸ್ಜಿಮಾ, ಸೋರಿಯಾಸಿಸ್‌ನಂತಹ ಚರ್ಮರೋಗಳಿಗೂ, ಕೀಲು ನೋವು, ಮರುಕಳಿಸುವ ಮೂತ್ರನಾಳದ ಸೋಂಕು, ಮಲಬದ್ಧತೆ, ಆಮ್ಲೀಯತೆ, ಎದೆಯುರಿ, ನಿದ್ರಾಹೀನತೆ, ಒತ್ತಡ, ಆತಂಕ, ಸೌಮ್ಯ ಖಿನ್ನತೆ, ಮೈಗ್ರೇನ್, ಥೈರಾಯ್ಡ್ ಮತ್ತು ಪಿಸಿಓಎಸ್‌ನಂತಹ ದೀರ್ಘಕಾಲದ ಕಾಯಿಲೆಗಳಿಗೂ ಹಾಗೂ ಮಕ್ಕಳ ಕಾಯಿಲೆಗಳು, ಗರ್ಭಾವಸ್ಥೆಯ ಸೌಮ್ಯ ಸಮಸ್ಯೆಗಳು ಮತ್ತು ಗಾಯಗಳು/ಆಘಾತದ ನಂತರದ ಸಮಸ್ಯೆಗಳಿಗೂ, ಪ್ರಾಣಿ- ಪಶುಗಳ ಸಮಸ್ಯೆಗಳಿಗೂ ಹೀಗೆ ಇನ್ನಿತರ ಸಮಸ್ಯೆಗಳಿಗೂ ಸಹಾಯಕವಾಗಬಲ್ಲದು.
ಹೋಮಿಯೋಪತಿಯು ನಿಮ್ಮನ್ನು ಕೇವಲ ರೋಗಲಕ್ಷಣಗಳ ಸಂಗ್ರಹದಂತೆ ನೋಡದೆ, ನಿಮ್ಮನ್ನು ಓರ್ವ ಸಂಪೂರ್ಣ ವ್ಯಕ್ತಿಯಾಗಿ ಪರಿಗಣಿಸುತ್ತದೆ. ಉತ್ತಮ ಮೆಕ್ಯಾನಿಕ್ ಇಡೀ ಕಾರನ್ನು ನೋಡುವಂತೆ, ಹೋಮಿಯೋಪತಿ ವೈದ್ಯರು ಸಮಸ್ಯೆಯ ಮೂಲ ಕಾರಣವನ್ನು ಹಾಗು ಸೂಕ್ತವಾದ ಪರಿಹಾರವನ್ನು ಕಂಡುಹಿಡಿಯಲು ನಿಮ್ಮ ದೈಹಿಕ ಆರೋಗ್ಯ, ಭಾವನೆಗಳು ಮತ್ತು ಜೀವನಶೈಲಿಗೂ ಪ್ರಾಮುಖ್ಯತೆ ನೀಡುತ್ತಾರೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಹೋಮಿಯೋಪತಿಯು 'ದೇಹವು ತನ್ನಷ್ಟಕ್ಕೆ ತಾನೇ ಗುಣಮುಖವಾಗುವ ಶಕ್ತಿಯನ್ನು' ಜಾಗೃತಗೊಳಿಸುವ ಒಂದು ಸೌಮ್ಯವಾದ ಹಾಗೂ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನ ಹಾಗು ಹೋಮಿಯೋಪತಿ ವೈದ್ಯರು ಕುಟುಂಬ ವೈದ್ಯರಾಗಿ ಉತ್ತಮ ಆಯ್ಕೆಯಾಗಬಲ್ಲರು.
ಡಾ ಕೃತಿ
MD (Hom)














