Coastal Bulletin

ಬಂಟ್ವಾಳ : ನೇರಳಕಟ್ಟೆ – ನೇತಾಜಿ ನಗರದ ನೇತಾಜಿ ಗೆಳೆಯರ ಬಳಗ ಇದರ ವತಿಯಿಂದ ಕ್ರೀಡೋತ್ಸವ 2023 ರೈ ಅಂಗವಾಗಿ ಪುರುಷರ ವಾಲಿಬಾಲ್ ಹಾಗೂ 60 ಕೆ.ಜಿ. ವಿಭಾಗದ ಪ್ರೋ ಮಾದರಿ ಕಬಡ್ಡಿ ಪಂದ್ಯಾಟ ಜ.28 ರಂದು ನೇರಳಕಟ್ಟೆ ರೈಲ್ವೇ ನಿಲ್ದಾಣದ ಬಳಿ ನಡೆಯಲಿದೆ.

ಸಮಾರಂಭವನ್ನು ಬಂಟ್ವಾಳ ಜನಪ್ರಿಯ ಶಾಸಕ ರಾಜೇಶ್ ನಾಯ್ಕ್ ಹಾಗೂ ಕ್ರೀಡಾಂಗಣವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದು ಉರ್ದಿಲಗುತ್ತು ರಾಮ್ ಪ್ರಸಾದ್ ರೈ ಅಧ್ಯಕ್ಷತೆ ವಹಿಸುವರು. ಅನಂತ ಪ್ರಭು ಸದ್ಗುರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಇದೇ

ವೇಳೆ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ. ಎಂ.ಕೆ. ಪ್ರಸಾದ್ ಭಂಡಾರಿ, ನಾಟಿ ವೈದ್ಯ ಗಂಗಾಧರ ಪಂಡಿತ್ ಗೋಳಿಕಟ್ಟೆ, ಶಿಕ್ಷಕಿ ಸುಲೋಚನಾ ರೈ ಅವರನ್ನು ಸನ್ಮಾನಿಸಲಾಗುವುದು ಎಂದು ನೇತಾಜಿ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment