Coastal Bulletin

ಬಂಟ್ವಾಳ :ಭಾರತವು ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರ ದೇಶವಾಗಿದ್ದು ಇದನ್ನು ಉಳಿಸಿ ಕಾಪಾಡಿಕೊಂಡು ಬರಬೇಕಾಗಿದ್ದು ನಮ್ಮೆಲ್ಲರ ಆದ್ಯ ಕರ್ತವ್ಯ, ಜಾತಿ ಮತ ಪಂಥ ಬೇಧ ಮರೆತು ಸಾಮರಸ್ಯದಿಂದ ಬಾಳಬೇಕಾದ ಅಂಶವನ್ನು ಮನದಟ್ಟು ಮಾಡಿಕೊಂಡು ನಡೆದರೆ ಗಾಂಧೀಜಿಯವರ ಸುಭಿಕ್ಷೆಯ ರಾಮ ರಾಜ್ಯದ ಕನಸು ನನಸಾಗಲು ಸಾಧ್ಯ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳಾಗಿದ್ದು,ಹಿರಿಯರ ಆದರ್ಶಗಳನ್ನು ಮೈಗುಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಆಳ್ವ ಕೆ ಎನ್ ಹೇಳಿದರು.

ಆವರು ಮೋಹಿಯುದ್ದಿನ್ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಏರ್ಪಡಿಸಲಾಗಿದ್ದ 74ನೆೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಧ್ವಜಾರೋಹಣಗೈದು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೌಢಶಾಲೆಯ ವಿಶ್ರಾಂತ ಮುಖ್ಯ ಶಿಕ್ಷಕ ಶ್ರೀನಿವಾಸ ಕೆದಿಲ, ಮುಕ್ಯೋಪಾಧ್ಯಯಿನಿ ವಿದ್ಯಾ ಕೆ, ದೆೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೆೈ

ಬಿ., ದೆೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನ ಗೊಂಸಾಲ್ವಿಸ್ ಅಶೋಕ್ ಡಿ ತುಂಬೆ, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ್ ಶೆಟ್ಟಿ ಎಂ ಸ್ವಾಗತಿಸಿ ನಿರೂಪಿಸಿದರು. . ದೆೈಹಿಕ ಶಿಕ್ಷಣ ನಿದೆೇತಶಕ ಸಾಯಿರಾಮ್ ಜೆ. ನಾಯಕ್ ಧನ್ಯವಾದವಿತ್ತರು.

Leave a Comment