ಬಂಟ್ವಾಳ:ಜಲಜೀವನ ಮಿಷನ್ ಜಿಲ್ಲಾ ಪಂಚಾಯತ್ ಮಂಗಳೂರು , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ, ಗ್ರಾಮ ಪಂಚಾಯತ್ ಸರಪಾಡಿ ಇವರ ಸಹಭಾಗಿತ್ವದಲ್ಲಿ ಸಮುದಾಯ ಸಂಸ್ಥೆ ಇವರ ಸಂಯೋಜನೆಯಲ್ಲಿ ಜಲ ಜೀವನ್ ಮಿಷನ್ ಇದರ ಮಾಹಿತಿ ಶಿಕ್ಷಣ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹರ್ ಘರ್ ಜಲ್ ಕಾರ್ಯಕ್ರಮ ಆಯೋಜಿಸಲಾಯಿತು.
ವಿಶೇಷ ಗ್ರಾಮ ಸಭೆ ನಡೆಸಿ ಮನೆ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ, ಮೀಟರ್ ಅಳವಡಿಕೆಯ ಉಪಯೋಗ, ಜಲ ಜೀವನ್ ಮಿಷನ್ ಕಾರ್ಯಚಟುವಟಿಕೆಗಳು, ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಸಮುದಾಯ ವಂತಿಗೆ ಮಹತ್ವದ ಕುರಿತು ತಿಳಿಸಲಾಯಿತು. ಸರಪಾಡಿ ಹಾಗೂ ದೇವಶ್ಯ ಗ್ರಾಮಗಳನ್ನು ಹರ್ ಘರ್ ಜಲ್
ಗ್ರಾಮವೆಂದು ಘೋಷಣೆ ಮಾಡಲಾಯಿತು.
ಜಲಜೀವನ್ ಮಿಷನ್ ಸಂಯೋಜಕರಾದ ಚರಣ್ ಕಾರ್ಯಕ್ರಮ ಸಂಯೋಜಿಸಿ ಮಾಹಿತಿ ನೀಡಿದರು. ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಘೋಷಣೆ ಮಾಡಿದರು. ಉಪಾಧ್ಯಕ್ಷರು,ಗ್ರಾಮ ಪಂಚಾಯತ್ ನ ಸದಸ್ಯರು,ಪಿಡಿಒ, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ವಿಘ್ನೇಶ್ ರಾಜ್ ಹರ್ ಘರ್ ಜಲ್ ನ ಮಹತ್ವ ಮನವರಿಕೆ ಮಾಡಿದರು.














