ಗೋವಿನತೋಟ :ಡಿ. 30ರಂದು ರಾಧಾ ಸುರಭಿ ಗೋ ಮಂದಿರದಲ್ಲಿ ನಂದಿ ರಥಯಾತ್ರೆಗೆ ಚಾಲನೆ ಗೋವಿನ ಬಗ್ಗೆ ಜಾಗೃತಿಗಾಗಿ 88 ದಿನಗಳ ಕಾಲ ರಾಜ್ಯಾದ್ಯಂತ ಸಂಚಾರ.

Coastal Bulletin
ಗೋವಿನತೋಟ :ಡಿ. 30ರಂದು ರಾಧಾ ಸುರಭಿ ಗೋ ಮಂದಿರದಲ್ಲಿ ನಂದಿ ರಥಯಾತ್ರೆಗೆ ಚಾಲನೆ ಗೋವಿನ ಬಗ್ಗೆ ಜಾಗೃತಿಗಾಗಿ 88 ದಿನಗಳ ಕಾಲ ರಾಜ್ಯಾದ್ಯಂತ ಸಂಚಾರ.

ಮಂಗಳೂರು: ಗೋವಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಗೋವನ್ನು 'ರಾಷ್ಟ್ರೀಯ ಪ್ರಾಣಿ'.ಎಂದು ಘೋಷಿಸುವಂತೆ ಆಗ್ರಹಿಸುವ ನಿಟ್ಟಿನಲ್ಲಿ , ಗೋ ಸೇವಾ ಗತಿವಿಧಿ ಕರ್ನಾಟಕ, ರಾಧ ಸುರಭಿ ಗೋಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ಡಿ. 31ರಿಂದ 88 ದಿನಗಳ ಕಾಲ ರಾಜ್ಯಾದ್ಯಂತ ನಂದಿ ರಥಯಾತ್ರೆ ನಡೆಯಲಿದೆ ಎಂದು ಗೋಸೇವಾ ಗತಿವಿಧಿಯ ದಕ್ಷಿಣ ಪ್ರಾಂತ ಗೋ-ಸೇವಾ ಸಂಯೋಜಕ ಪ್ರವೀಣ್ ಸರಳಾಯ ತಿಳಿಸಿದರು.

ಮೊದಲ ವರ್ಷ 7 ದಿನಗಳ ಕಾಲ, ಎರಡನೇವರ್ಷ 48 ದಿನಗಳ ಕಾಲ ಸಂಚರಿಸಿದ್ದ ರಥಯಾತ್ರೆ ಈ ವರ್ಷ (ಮೂರನೇ ವರ್ಷ) ರಾಜ್ಯಾದ್ಯಂತ 88 ದಿನಗಳ ಕಾಲ ಸಂಚರಿಸಲಿದೆ. ಡಿ. 30ರಂದು ಬಂಟ್ವಾಳ ಪುದು ಗ್ರಾಮದ ಗೋವಿನತೋಟದ ರಾಧಸುರಭಿ ಗೋಮಂದಿರದಲ್ಲಿ ಗೋ ಸೇವಾ ಗತಿವಿಧಿ ಯ ಅಖಿಲ ಭಾರತ ಟೋಳಿ ಸದಸ್ಯ ಶಂಕರಲಾಲ್ ಜಿ. ಉದ್ಘಾಟಿಸಲಿದ್ದಾರೆ. ಡಿ. 31ರಂದು ರಥಯಾತ್ರೆಗೆ ರಾಧಸುರಭಿ ಗೋಮಂದಿರದಲ್ಲಿ ಚಾಲನೆ ನೀಡಲಾಗುವುದು. ಬಳಿಕ ರಾಜ್ಯಾದ್ಯಂತ ಸಂಚರಿಸಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಜ. 22ರಂದು ಶ್ರೀ ರಾಮ ಮಂದಿರ ನಿರ್ಮಾಣದ ವಾರ್ಷಿಕೋತ್ಸವದಂದು ದೀಪೋತ್ಸವ, ಫೆ. 27ರಂದು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ನಂದಿಬೆಟ್ಟದಲ್ಲಿ ನಂದಿ ಉತ್ಸವ, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

ಹಾಗೂ ದೀಪೋತ್ಸವ ನಡೆಯಲಿದೆ. ಮಾ. 29ರಂದು ಮಂಗಳೂರಿನಲ್ಲಿ ಸಮಾರೋಪ ಸಮಾರಂಭ ಮತ್ತು ಎ.6 ರಂದು ಮಂಗಳೂರಿನಲ್ಲಿ ಶ್ರೀ ರಾಮನವಮಿ ಉತ್ಸವ ನಡೆಯಲಿದೆ ಎಂದು ವಿವರಿಸಿದರು.

ಈ ರಥಯಾತ್ರೆಯಲ್ಲಿ 1,11,108 ಎಷ್ಟು ಸಹಸ್ರ ನಾಮ ಪಾರಾಯಣ, ಪ್ರತೀ ದಿನ ಸಂಜೆ 4 ಗಂಟೆಯಿಂದ 8 ಗಂಟೆಯ ತನಕ ನಂದಿ ಪೂಜೆ, 1 ಕೋಟಿ ಗೋಮಯ ಹಣತೆ ಉರಿಸುವುದು, 20 ಲಕ್ಷ ಹಣತೆ ಕಿಟ್ ವಿತರಿಸುವುದು, 1 ಲಕ್ಷನಂದಿ ಪೂಜೆ ನಡೆಸುವುದು ಮತ್ತು 1 ಸಾವಿರ ಮನೆಗಳಿಗೆ ಗೋವನ್ನು ದಾನವಾಗಿ ನೀಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖರಾದ ಭಕ್ತಿಭೂಷಣ ದಾಸ್, ಅನಿಲ್ ಪಂಡಿತ್, ಜಿತೇಂದ್ರ ಪ್ರತಾಪ್ ನಗರ, ನವೀನ್ ಮಾರ್ಲ, ಅಕ್ಷಯ್ ಇನೋಳಿ, ಗಂಗಾಧರ ಪೆರ್ಮಂಕಿ ಉಪಸ್ಥಿತರಿದ್ದರು.

Leave a Comment