ನಂದನಹಿತ್ಲು: ದೈವಸ್ಥಾನಕ್ಕೆ ನೂತನ ಧ್ವಜ ಸ್ತಂಭದ ಪ್ರಯುಕ್ತ ವೃಕ್ಷದಛೇಧಕ್ಕೆ ಮುಹೂರ್ತಪೂಜಾ.

Coastal Bulletin
ನಂದನಹಿತ್ಲು: ದೈವಸ್ಥಾನಕ್ಕೆ ನೂತನ ಧ್ವಜ ಸ್ತಂಭದ ಪ್ರಯುಕ್ತ ವೃಕ್ಷದಛೇಧಕ್ಕೆ ಮುಹೂರ್ತಪೂಜಾ.

ಬಂಟ್ವಾಳ: ತಾಲೂಕಿನ ನಂದನಹಿತ್ಲು ಶ್ರೀ ವೈದ್ಯನಾಥ ,ಅರಸು,ಜುಮಾದಿಬಂಟ ದೈವಸ್ಥಾನಕ್ಕೆ ನೂತನ ಧ್ವಜ ಸ್ತಂಭ ಸಮರ್ಪಣೆಯ ಹಿನ್ನಲೆಯಲ್ಲಿ ಬಂಟ್ವಾಳ ತ್ಯಾಗರಾಜರಸ್ತೆಯಲ್ಲಿ ಗುರುತಿಸಲಾದ ವೃಕ್ಷದಛೇಧಕ್ಕೆ ಸ್ಥಳದಲ್ಲಿ ಮುಹೂರ್ತಪೂಜಾ ವಿಧಿ ವಿಧಾನವನ್ನು ಶನಿವಾರ ನಡೆಸಲಾಯಿತು.

ಕ್ಷೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿಯವರ ನೇತೃತ್ವದಲ್ಲಿ ವೃಕ್ಷಕ್ಕೆ ಧಾರ್ಮಿಕ ವಿಧಿವಧಾನಗಳನ್ನು ನೆರವೇರಿಸಲಾಯಿತು.


ಈ ಸಂದರ್ಭ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ,ಬಾಳಿಗಾ ಮನೆತನದ ಬಿ. ಸುಧೀರ್ ಬಾಳಿಗಾ,ಮನೆತನದ ವಿಶ್ವನಾಥ ಪೂಜಾರಿ ಪೊನ್ನಂಗಿಲಗುತ್ತು,ಸಂಜೀವಪೂಜಾರಿ ಪೆಲತ್ತಿಮಾರು, ಲೋಕೇಶ್ ಬಂಗೇರ ಗಾಣದಪಡ್ಪು,ಲೋಕನಾಥ ಪೂಜಾರಿ ಬಡಕೊಟ್ಟು, ಧ್ವಜಸ್ತಂಭಕ್ಕಾಗಿ ಮರವನ್ನು ಉಚಿತವಾಗಿ ದಾನಗೈದ ಅವಿನಾಶ್ ಕಾಮತ್ ಉಪಸ್ಥಿತರಿದ್ದರು.

ಶಿಲ್ಪಿ ಸದಾಶಿವ

ಶೆಣೈ, ವಸಂತಪ್ರಭು,ಅಮ್ಮು ತುಂಬೆ,ದೇವದಾಸ ಅಮೀನ್ ಬಂಟ್ವಾಳ,ಜಯ ಸುವರ್ಣ, ಶಿವಪ್ರಸಾದ್ ಕೊಟ್ಟಾರಿ,ಜಗನ್ನಾಥ ಸಾಲಿಯಾನ್ ತುಂಬೆ,ಅರುಣ್ ಕುಮಾರ್ ಬೊಳ್ಳಾರಿ,ಯೋಗೀಶ್ ಕೋಟ್ಯಾನ್ ತುಂಬೆ, ಸಂತೋಷ್ ಕುಮಾರ್ ತುಂಬೆ,ಶೇಖರ್ ಮಂಡಾಡಿ,ರಿಷಿ ಮಹಾಬಲ ಬಂಗೇರ,ಗೋಪಾಲಕೃಷ್ಣ ,ಅಶ್ವಿತ್,ಸರೇಶ್ ನಾವೂರು,ಅಕ್ಷಿತ್ ಮುಗ್ಡಾಲ್ ಗುಡ್ಡೆ ಮೊದಲಾದವರಿದ್ದರು.

ಇದೇ ವೇಳೆ ಮರ ಕತ್ತರಿಸುವುದು ಸಹಿತ ಮುಂದಿನ ಪ್ರಕ್ರಿಯೆಗೆ ವಿಶ್ವಕರ್ಮರಿಗೆ ವೀಳ್ಯ‌ ನೀಡಲಾಯಿತು.ಇದಕ್ಕು ಮುನ್ನ ಶ್ರೀ ವೈದ್ಯನಾಥ ,ಅರಸು,ಜುಮಾದಿಬಂಟ ದೈವಸ್ಥಾನದಲ್ಲಿ ಪ್ರಾರ್ಥಿಸಲಾಯಿತು.

Leave a Comment