ಸುಜೀರು :ಏಕಾಹ ಭಜನಾ ಮಹೋತ್ಸವ ಹಾಗೂ ರುದ್ರಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
ಸುಜೀರು :ಏಕಾಹ ಭಜನಾ ಮಹೋತ್ಸವ ಹಾಗೂ ರುದ್ರಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಸುಜೀರು ಶ್ರೀ ರಾಮ ವೈದ್ಯನಾಥ ಭಜನಾ ಮಂದಿರ ಇದರ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಏಕಾಹ ಭಜನಾ ಮಹೋತ್ಸವ ಹಾಗೂ ಲೋಕ ಕಲ್ಯಾಣಾರ್ಥವಾಗಿ ನಡೆಯುವ ರುದ್ರಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಅ.27ರಂದು ಆದಿತ್ಯವಾರ ಸುಜೀರು ಶ್ರೀ ರಾಮ ವೈದ್ಯನಾಥ ಭಜನಾ ಮಂದಿರದಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಪ್ರಭುಜಿ, ಶ್ರೀರಾಮ ಹಾಗೂ ಶಿವ ಸಂಗಮದ ರುದ್ರಯಾಗದಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ ದೇವತೆಗಳ ಸಂತುಷ್ಟರಾಗುತ್ತಾರೆ ಆದ್ದರಿಂದ ನಾವು ಶುದ್ಧಚಾರದಿಂದ ರುದ್ರಯಾಗದಲ್ಲಿ ಭಾಗಿಯಾಗಿ ಮಹಾ ಯಜ್ಞವನ್ನು ಯಶಸ್ವಿಗೊಳಿಸೋಣ ಎಂದರು.


ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಐತಪ್ಪ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ .ನಾವೆಲ್ಲರೂ ಒಗ್ಗಟ್ಟಿನಿಂದ ರುದ್ರಯಾಗದಲ್ಲಿ ಭಾಗವಹಿಸುದರ ಜೊತೆಗೆ ದುಷ್ಟ ಶಕ್ತಿಗಳು ನಾಶವಾಗಿ ಲೋಕಕ್ಕೆ ಕಲ್ಯಾಣವಾಗಲಿ ಎಂದು ಹೇಳಿದರು.

ವೇದಮೂರ್ತಿ ರಘುರಾಮ ಮಯ್ಯ ಯಾಗದ ಮಹತ್ವದ ಬಗ್ಗೆ

ವಿವರಿಸಿದರು.ಅಮೃತ ಮಹೋತ್ಸವ ಸಮಿತಿಯ ಸಂಚಾಲಕ ತಾರಾನಾಥ ಕೊಟ್ಟಾರಿ ರುದ್ರ ಯಾಗದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಗೌರವಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಸಲಹೆಗಾರ ರಾಮಕೃಷ್ಣ,ಶ್ರೀ ಅರಸು ವೈದ್ಯನಾಥ ದೈವದ ಪಾತ್ರಿ ಮೋನಪ್ಪ ಯಾನೆ ಮುಂಡ ಪೂಜಾರಿ, ಜ್ಯೋತಿಷಿ ಅನಿಲ್ ಪಂಡಿತ್,ಶ್ರೀ ರಾಮ ವೈದ್ಯನಾಥ ಭಜನಾ ಮಂದಿರ ಗೌರವಧ್ಯಕ್ಷ ರವೀಂದ್ರ ಕಂಬಳಿ ಸುಜೀರು ಬೀಡು, ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರು ಗುತ್ತು ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಸಮಿತಿಯ ಪ್ರ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಕೋಶಾಧಿಕಾರಿ ಪ್ರಮೋದ್ ಕುಮಾರ್ ಸುಜೀರು ವಂದಿಸಿದರು.

Leave a Comment