ಪೆರ್ಮಂಕಿ: ಪ್ರೀತಿ ಗೇಮ್ಸ್ ಕ್ಲಬ್ (ರಿ)ಅಶ್ರಯದಲ್ಲಿ ಉಚಿತ ಪುಸ್ತಕ ಹಾಗೂ ಆರ್ಥಿಕ ಸಹಾಯ ವಿತರಣೆ.

Coastal Bulletin
ಪೆರ್ಮಂಕಿ: ಪ್ರೀತಿ ಗೇಮ್ಸ್ ಕ್ಲಬ್ (ರಿ)ಅಶ್ರಯದಲ್ಲಿ ಉಚಿತ ಪುಸ್ತಕ ಹಾಗೂ ಆರ್ಥಿಕ ಸಹಾಯ ವಿತರಣೆ.

ಮಂಗಳೂರು :ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ (ರಿ). ಇದರ ಆಶ್ರಯದಲ್ಲಿ ಮಾಜಿ ಶಾಸಕರಾದ ದಿವಂಗತ ಎನ್. ಶಿವರಾವ್ ಇವರ ಸ್ಮರಣಾರ್ಥ 23ನೇ ವರ್ಷದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಮೇ 26ರಂದು ಆದಿತ್ಯವಾರ ಸಂಘದ ಕಚೇರಿಯಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಶಾಂತ್ ಸಲ್ದಾನ ವಹಿಸಿದ್ದರು. ಗೌರವ ಅಧ್ಯಕ್ಷ ಎನ್. ರವಿರಾಜ್ ರಾವ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರುಗಳಾದ ಶ್ರೀಧರ

ಪೂಜಾರಿ, ಪದ್ಮನಾಭ ಪದ್ದೆಲ್ ತೋಟ ಭಾಗವಹಿಸಿದರು. ಪೆರ್ಮಂಕಿ ಪರಿಸರದ ಸುಮಾರು 90 ವಿದ್ಯಾರ್ಥಿಗಳು ಈ ಉಚಿತ ಪುಸ್ತಕದ ಸೌಲಭ್ಯವನ್ನು ಪಡೆದುಕೊಂಡರು.

Leave a Comment