ಸುಜೀರ್ :ಶ್ರೀ ವೀರ ಹನುಮಾನ್ ಮಂದಿರ (ರಿ.) ವತಿಯಿಂದ 13ನೇ ವರ್ಷದ ಪುಸ್ತಕ ವಿತರಣೆ.

Coastal Bulletin
ಸುಜೀರ್ :ಶ್ರೀ ವೀರ ಹನುಮಾನ್ ಮಂದಿರ (ರಿ.) ವತಿಯಿಂದ 13ನೇ ವರ್ಷದ ಪುಸ್ತಕ ವಿತರಣೆ.

ಬಂಟ್ವಾಳ :ಶ್ರೀ ವೀರ ಹನುಮಾನ್ ಮಂದಿರ (ರಿ.)ದತ್ತನಗರ ಸುಜೀರ್ ಇದರ ಅಶ್ರಯದಲ್ಲಿ 13ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮವು ಮೇ 26ರಂದು ಆದಿತ್ಯವಾರ ಹನುಮಾನ್ ಮಂದಿರದಲ್ಲಿ ನಡೆಯಿತು.

ಶ್ರೀ ವೀರ ಹನುಮಾನ್ ಮಂದಿರದ ಮಾಜಿ ಗೌರವಾಧ್ಯಕ್ಷರಾದ ದಿ! ಅರುಣ್ ಕುಮಾರ್ ಶೆಟ್ಟಿ ಯವರ ಪುತ್ರ ನಿಶಿತ್ ಶೆಟ್ಟಿ ಸುಜೀರ್ ಗುತ್ತು ಇವರ ಆರ್ಥಿಕ ಸಹಕಾರದಿಂದ ಸುಜೀರ್ ದತ್ತನಗರ, ಕೊಡಂಗೆ, ದೈಯ್ಯಡ್ಕ, ಮಲ್ಲಿ ಪರಿಸರದ 1ನೇ ತರಗತಿಯಿಂದ 10ನೇ ತರಗತಿ ವರೆಗಿನ ಸುಮಾರು 50 ವಿದ್ಯಾರ್ಥಿಗಳಿಗೆ ಉಚಿತ

ಪುಸ್ತಕ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಿಶಿತ್ ಶೆಟ್ಟಿ ಸುಜೀರ್ ಗುತ್ತು,ಅಧ್ಯಕ್ಷರಾದ ಸುರೇಂದ್ರ ಕಂಬಳಿ ಸುಜೀರ್ ಬೀಡು, ಪ್ರತಾಪ್ ಆಳ್ವ ಸುಜೀರ್ ಗುತ್ತು, ದಿನೇಶ್ ಶೆಟ್ಟಿ ಕೊಟ್ಟಿಂಜ, ದಾಮೋದರ ಸಪಲ್ಯ ಸುಜೀರ್, ಪುರುಷೋತ್ತಮ, ಗಣೇಶ್ ಎಸ್, ಮೀನಾಕ್ಷಿ , ಹಾಗೂ ಶ್ರೀ ವೀರ ಹನುಮಾನ್ ಮಂದಿರದ ಸರ್ವ ಸದಸ್ಯರು,ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Leave a Comment