Coastal Bulletin

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ನಾಣ್ಯದಲ್ಲಿ ಕುಲಾಲ ಸುಧಾರಕ ಸಂಘದ 30ನೇ ವಾರ್ಷಿಕೋತ್ಸವ ಸಮಾರಂಭವು ವಿಜೃಂಭಣೆಯಿಂದ ಕುಲಾಲ ಸಭಾ ಭವನದಲ್ಲಿ ಫೆ.26ರಂದು ಆದಿತ್ಯವಾರ ನಡೆಯಿತು.

ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಸಂಘ ನಾಣ್ಯದ ಅಧ್ಯಕ್ಷರಾದ ಬಿ.ನಾರಾಯಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ,ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್,ಯುವ ಉದ್ಯಮಿ ಅನಿಲ್ ದಾಸ್,ಕೆನರಾ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟಂಟ್ ಪ್ರೊಫೆಸರ್ ಜಯಶ್ರೀ ಕೆ, ಶ್ರೀ ವೀರ ನಾರಾಯಣ ದೇವಸ್ಥಾನದ ಆಡಳಿತ ಮುಕ್ತೇಸರರಾದ ಗಿರಿಧರ್ ಜೆ ಮೂಲ್ಯ, ಬಂಟ್ವಾಳ ತಾಲೂಕು ಕುಲಾಲ ಸಂಘದ ಜೊತೆ ಕಾರ್ಯದರ್ಶಿ ಜಯ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹಧನ ವನ್ನು ವಿತರಿಸಲಾಯಿತು.

ಮಾಜಿ ಅಧ್ಯಕ್ಷರಾದ ದೇವದಾಸ್

ಕೆ ಆರ್ ಸ್ವಾಗತಿಸಿದರು , ಪ್ರ. ಕಾರ್ಯದರ್ಶಿ ವಿಶ್ವನಾಥ ಕುಲಾಲ್ ವಾರ್ಷಿಕ ವರದಿ ಮಂಡಿಸಿದರು , ಸುರೇಶ ಕುಲಾಲ್ ಹಾಗೂ ಲಿಖಿತ್ ವಿದ್ಯಾ ಪ್ರೋತ್ಸಾಹಧನ ಪಟ್ಟಿಯನ್ನು ವಾಚಿಸಿದರು, ಮಹಿಳಾ ಘಟಕದ ಅಧ್ಯಕ್ಷೆ ನಯನಾಕ್ಷಿ ಧನ್ಯವಾದವಿತ್ತರು, ನವೀನ್ ಕೊಡ್ಮನ್ ಚಾಪೆ, ಮತ್ತು ಗೌತಮಿ ಸುಜಿರು ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗೆ 8 ಗಂಟೆಗೆ ಗಣಹೋಮ,9ರಿಂದ ವಾರ್ಷಿಕ ಮಹಾಸಭೆ ಮತ್ತು 10 ರಿಂದ 12.30 ರವರೆಗೆ ವಾರ್ಷಿಕ ಕ್ರೀಡಾಕೂಟ ನಡೆಯಿತು.ಮಧ್ಯಾಹ್ನ ಸಹ ಭೋಜನ. ನಂತರ ಸಂಗೀತ ಸ್ಪರ್ಧೆ ನಡೆದು. ಸಭಾ ಕಾರ್ಯಕ್ರಮದ ನಂತರ ಮಹಿಳಾ ಘಟಕದ ಸದಸ್ಯರಿಂದ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮ ಜನ ಮೆಚ್ಚುಗೆ ಪಡೆಯಿತು.

Leave a Comment