Coastal Bulletin

ಬಂಟ್ವಾಳ :33 ವರ್ಷಗಳ ಸುದೀರ್ಘ ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಸರಳ ಸಜ್ಜನಿಕೆಯಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತೆರಳುದೆಂದರೆ ಅದು ಸಂಸ್ಥೆಗೆ ತುಂಬಲಾರದ ನಷ್ಟ ಎಂಬುದಾಗಿ ಮೋಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಬಿ ಅಬ್ದುಲ್ ಸಲಾಂ ಹೇಳಿದರು.

ಅವರು ಮೋಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ತುಂಬೆ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್ ಕೆದಿಲ ಇವರಿಗೆ ಏರ್ಪಡಿಸಿದ್ದ ವಿದಾಯ ಕೂಟ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರಾದ ಶ್ರೀನಿವಾಸರಿಗೆ ಚಿನ್ನದ ಚಿನ್ನದ ಉಂಗುರ ಹಾಗೂ ಬೆಳ್ಳಿಯ ತಟ್ಟೆಯನ್ನು ನೀಡಿ ಸನ್ಮಾನಿಸಿ ಅವರ ಸೇವೆಯನ್ನು ಕೊಂಡಾಡಿದರು.

ಶ್ರೀನಿವಾಸ್ ರವರ ಒಡನಾಡಿ ದಿನೇಶ್ ಶೆಟ್ಟಿ ಅಳಿಕೆ ಅವರು ಅಭಿನಂದನಾ ಭಾಷಣ ಮಾಡಿ, ಅಜಾತಶತ್ರುವಾದ ಶ್ರೀನಿವಾಸ್ ರವರು ಅರಿಷಡ್ವಗಗಳನ್ನು ಗೆದ್ದದರಿಂದ ಎಲ್ಲರ ಪ್ರೀತಿ ಗೆದ್ದು,ಪ್ರಾಮಾಣಿಕತೆಯಿಂದ ಸಾರ್ಥಕ ಜೀವನ ಸಾಗಿಸಲು ಕಾರಣ ಎಂದು ಹೇಳಿದರು.

ಸಮಾರಂಭದಲ್ಲಿ,ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ಗಂಗಾಧರ ಆಳ್ವ ಕೆ ಎನ್, ಕೆದಿಲ ಅವರು ಮಾನತವಾದಿ ಒಳ್ಳೆಯ ಆಡಳಿತಗಾರ,ಉತ್ತಮ ಶಿಕ್ಷಕ ಎಂಬುದಾಗಿ ಪ್ರಶಂಶಿಸಿ ಅವರ ವಿಶ್ರಾಂತ ಜೀವನವು ಸುಖಕರವಾಗಿರಲಿ ಎಂಬುದಾಗಿ ಹಾರೈಸಿದರು.

ಇದೇ ಸಂದರ್ಭದಲ್ಲಿ ಅವರಿಗೆ ಸಂಸ್ಥೆಯ ಶಿಕ್ಷಕರು ಹಾಡಿನ ಮೂಲಕ ವಿದಾಯ ಸಲ್ಲಿಸಿ ದಂಪತಿಗಳಿಗೆ ಆರತಿ

ಬೆಳಗಿಸಿ ಮಡಿಲು ತುಂಬಿಸಿ ಗೌರವ ಸಲ್ಲಿಸಿದರು.

ವಿ ಎಸ್ ಭಟ್,ಪ್ರತಿಮಾ,ರಮೇಶ್ ಮೇಲ್ಕಾರ್ ಕಾವ್ಯ ವಾಚನದ ಮೂಲಕ ಅಭಿನಂದಿಸಿದರು. ಮುಖ್ಯೋಪಾಧ್ಯಾಯನಿ ವಿದ್ಯಾ.ಕೆ ಸನ್ಮಾನ ಪತ್ರ ವಾಚಿಸಿದರು, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿ ರಾಮ್ ನಾಯಕ್, ಶಿಕ್ಷಕರಾದ ರಘುಪತಿ ಭಟ್,ರಾಜಾ ಎಸ್, ಮಲ್ಲಿಕಾ ಎಸ್ ಶೆಟ್ಟಿ, ಕಚೇರಿ ಆದಿಕ್ಷಕ ಅಬ್ದುಲ್ ಕಬಿರ್ ಹಳೇ ವಿದ್ಯಾರ್ಥಿಗಳಾದ ಪಂಚಾಯತ್ ಅಧ್ಯಕ್ಷ ಪ್ರವೀಣ್ ಬಿ ತುಂಬೆ,ಯೋಗೀಶ್ ಬೊಳ್ಳಾರಿ, ಬಿಎ ಐಟಿಐ ಪ್ರಾಂಶುಪಾಲರಾದ ನವೀನ್ ಕುಮಾರ್ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಪಾತಿಮತ್ ನಿಶಾ ಗುರುಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು

ಪಿ ಟಿ ಎ ಅಧ್ಯಕ್ಷರಾದ ಬಶೀರ್ ತಂಡೇಲ್ ಉಪಾಧ್ಯಕ್ಷ ನಿಸಾರ್ ಅಹ್ಮದ್,ಕಾರ್ಯಕಾರಿ ಸಮಿತಿಯ ಸುರೇಶ್ ಕುಲಾಲ್ ನೆತ್ತರಕೆರೆ , ಅಬ್ದುಲ್ ಅಜಿಜ್ ಪಂಚಾಯತ್ ಸದಸ್ಯರಾದ ಗಣೇಶ್ ಸಾಲಿಯಾನ್, ಕಲಾವಿದ ಸದಾಶಿವ ಡಿ ತುಂಬೆ, ಕುಮಾರಿ ಅನನ್ಯ ಮತ್ತಿತರರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕ ಜಗದೀಶ್ ರೈಬಿ ನಿರೂಪಿಸಿ, ಉಪನ್ಯಾಸಕ ಡಿಬಿ ಅಬ್ದುಲ್ ರೆಹಮಾನ್ ವಂದಿಸಿದರು

Leave a Comment