Coastal Bulletin

ಬಂಟ್ವಾಳ: ಕೊಡುಗೈ ಧಾನಿ,ಹಿರಿಯ ಉದ್ಯಮಿ, ಸಮಾಜ ಸೇವಕ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ 2022-23 ರ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಪಚ್ಚಿನಡ್ಕ ಕೆ.ಸೇಸಪ್ಪ ಕೋಟ್ಯಾನ್ (75) ಜನವರಿ 26ರಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದು, ಅವರ ಪ್ರಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ ಆಸ್ಪತ್ರೆಯಿಂದ ಅವರ ಸ್ವಗೃಹಕ್ಕೆ ತರಿಸಿ, ಅಂತಿಮ ಕ್ರಿಯೆಯ ವಿಧಿವಿಧಾನಗಳು ನಡೆಯುತ್ತಿದೆ. ಇಂದು ಮಧ್ಯಾಹ್ನದ ವೇಳೆ ಅವರ ಮನೆಯ ಸಮೀಪದ ಜಾಗದಲ್ಲಿ ಅಂತಿಮ ಕ್ರಿಯೆ ನಡೆಯಲಿದೆ.

ಅವರ ಸಾವಿನ ಸುದ್ದಿ ತಿಳಿಯುವುತ್ತಿದ್ದಂತೆ ರಾಜಕೀಯ, ಧಾರ್ಮಿಕ,ಮುಖಂಡರು ಸಹಿತ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಬಂಟ್ವಾಳದಲ್ಲಿ ಯಶಸ್ವಿ ಉದ್ಯಮಿ ಎಂಬ ಹೆಗ್ಗಳಿಕೆ ಗೆ ಪಾತ್ರವಾಗಿದ್ದ ಇವರು ಶುಭ ಬೀಡಿ, ಶುಭ ಟ್ರಾವೆಲ್ಸ್ , ಶುಭಲಕ್ಮೀ ಮದುವೆ ಹಾಲ್, ಸಹಿತ ಅನೇಕ ಉದ್ಯಮ ನಡೆಸುತ್ತಿದ್ದು, ಅನೇಕ ಕುಟುಂಬಗಳಿಗೆ ಉದ್ಯೋಗ ನೀಡಿದ ಅನ್ನದಾತರಾಗಿದ್ದರು.ಇವರ ಮದುವೆಯಾಗಿ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚಿಗೆ ಮನೆಯಲ್ಲಿ ಶುಭಯಾನ ಎಂಬ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿದ್ದರು.

ಜಿಲ್ಲಾ ರಾಜ್ಯೋತ್ಸವ

ಪ್ರಶಸ್ತಿ ಯನ್ನು ಈ ಬಾರಿ ಪಡೆದಿದ್ದರು.ಇವರು ಧಾರ್ಮಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅನನ್ಯ ವಾಗಿದ್ದು, ಅನೇಕ ದೈವ ದೇವಸ್ಥಾನ ಗಳು ಜೀರ್ಣೋದ್ಧಾರ ಇವರ ಮೂಲಕ ನಡೆದಿವೆ.

ಬಂಟ್ವಾಳ ‌ಪೋಲೀಸ್ ಲೈನ್ ನ ದೇವಸ್ಥಾನದ ಅಧ್ಯಕ್ಷ ರಾಗಿದ್ದ ಇವರು ಕಳೆದ 25 ವರ್ಷಗಳಿಂದ ಬಂಟ್ವಾಳ ಬಿಲ್ಲವ ಸಂಘದ ಯಶಸ್ವಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು

ಪತ್ನಿ ಚಂದ್ರಾವತಿ,ಪುತ್ರ ಭುವನೇಶ್ ಪಚ್ಚಿನಡ್ಕ , ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.

Leave a Comment