ಬಂಟ್ವಾಳ :ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿಯಿಂದ ಆರಂಭವಾದ ಸಾರ್ವಜನಿಕ ಗಣೇಶೋತ್ಸವವು ನಿರಂತರ 42ವರ್ಷಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಶ್ರೀ ಗಣೇಶನ ಆರಾಧನೆಯ ಮೂಲಕ ವ್ಯಸನ ಮುಕ್ತ, ರೋಗ ಮುಕ್ತವಾದ ಸುದೃಡ ಸುಸಂಸ್ಕೃತ ಸಮಾಜ ನಿರ್ಮಾಣದ ಕೈಂಕರ್ಯದ, ಜನತಾ ಜನಾರ್ದನನ ಸೇವೆಯ ದೀಕ್ಷೆಯನ್ನು ತೊಟ್ಟು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಮೂಲಕ ಮುನ್ನಡೆಯುತ್ತ ಬಂದಿದ್ದು, ಇದೀಗ 43ನೇ ವರ್ಷದ ಫರಂಗಿಪೇಟೆ ಗಣೇಶೋತ್ಸವ ಆ 27 ರಿಂದ 29ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಸೇವಾಂಜಲಿ ಸಭಾಗೃಹದಲ್ಲಿ ಸಂಭ್ರಮದಿಂದ ನಡೆಯಲಿದೆ.
ಆ 27 ರಿಂದ 29ವರೆಗೆ ಮೂರು ದಿನಗಳ ಕಾಲ ಪ್ರತಿದಿನ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆಯಲಿದೆ.
ಆ 29ರಂದು ಶುಕ್ರವಾರ ದೇವರ ಶೋಭಾಯಾತ್ರೆ ಸಂಜೆ ಗಂಟೆ 5.30ಕ್ಕೆ ಉತ್ಸವ ಸ್ಥಾನದಿಂದ
ಹೊರಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಡೆಗೋಳಿಯವರೆಗೆ ಸಾಗಿ, ಅಲ್ಲಿಂದ ಅದೇ ದಾರಿಯಲ್ಲಿ ಹಾದು ಅರ್ಕುಳದ ನೇತ್ರಾವತಿ ನದಿಯಲ್ಲಿ ವಿಸರ್ಜನೆಯಾಗಲಿದೆ ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆ ತಿಳಿಸಿದ್ದಾರೆ















