ಬಂಟ್ವಾಳ: ದ. ಕ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರ ವಿಶೇಷ ಅನುದಾನದಿಂದ ನಿರ್ಮಾಣಗೊಂಡ ಕೊಡ್ಮಾಣ್- ಕೊಟ್ಟಿoಜ ಸಂಪರ್ಕಸುವ ಕಾಂಕ್ರೀಟ್ ರಸ್ತೆಯನ್ನು ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಕೇಶ್ ಶೆಟ್ಟಿ ತೇವು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಗ ಕೊಡ್ಮಾಣ್ ಕೊಡಿ, ನಿಕಟಪೂರ್ವ ಉಪಾದ್ಯಕ್ಷ ಪದ್ಮನಾಭ ಶೆಟ್ಟಿ ಕೊಟ್ಟಿoಜ,ಗುತ್ತಿಗೆದಾರ ಮೋಹನ್ ದಾಸ್ ರೈ,ಕೊಡ್ಮಾಣ್ ಶಾರದಾ ಪೂಜಾ ಸೇವಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸಂತೋಷ ಕೊಡ್ಮಾಣ್, ರವೀಂದ್ರ ನಾಯ್ಕ್, ಸಂಜೀವ ಬೆಳ್ಚಾಡ, ಗ್ರಾ ಪಂ ಸದಸ್ಯೆ
ಹರಿಣಾಕ್ಷಿ ಆರ್ ಬಂಗೇರ, ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕಿ ಶೈಲಜಾ ಪಿ .ಶೆಟ್ಟಿ, ಹರೀಶ್ ಕುಮಾರ್ ಕಲ್ಲಜಾಲ್ , ಶುಭಕಿರಣ್ ಕೊಟ್ಟಾರಿ, ಹರೀಶ್ ಕುಮಾರ್ ಕಾಂಜಿಲ ಕೋಡಿ, ಅರುಣ್ ಕುಮಾರ್ ಶೆಟ್ಟಿ ಕೊಟ್ಟಿoಜ ಮತ್ತಿತರರು ಉಪಸ್ಥಿತರಿದ್ದರು














