ಕುಮ್ದೇಲ್ : ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ. ಜು 30, ವಾರ್ಷಿಕೋತ್ಸವ ಸಮಾರಂಭ,ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ನೃತ್ಯ ವೈವಿದ್ಯ.

Coastal Bulletin
ಕುಮ್ದೇಲ್ : ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ. ಜು 30, ವಾರ್ಷಿಕೋತ್ಸವ ಸಮಾರಂಭ,ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ನೃತ್ಯ ವೈವಿದ್ಯ.

ಬಂಟ್ವಾಳ :ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ ಕುಮ್ದೇಲ್ ಪುದು ಇದರ 9ನೇ ವಾರ್ಷಿಕೋತ್ಸವ ಸಮಾರಂಭವು ಜು 30ರಂದು ಆದಿತ್ಯವಾರ ಬೆಳಿಗ್ಗೆ 10ರಿಂದ ಕುಲಾಲ ಸಮುದಾಯ ಭವನ ನಾಣ್ಯ ಮಾರಿಪಳ್ಳದಲ್ಲಿ ನಡೆಯಲಿದೆ.

ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಬಾಬು ಪೂಜಾರಿ ವಹಿಸಲಿದ್ದು ಅನೇಕ ಸಾಧಕ ಗಣ್ಯ ಅತಿಥಿಗಳು ಉಪಸ್ಥಿತರಿರುವರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ

ಪುರಸ್ಕಾರ ನಡೆಯಲಿದ್ದು ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈವಿದ್ಯ ನಡೆಯಲಿದೆ ಎಂದು ಸಮಿತಿಯ ಪ್ರ ಕಾರ್ಯದರ್ಶಿ ಕಿಶೋರ್ ಸುಜೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment