ಬಂಟ್ವಾಳ :ಮೇ ತಿಂಗಳ 22ರಿಂದ 24ರ ವರೆಗೆ ಹೈದ್ರಾಬಾದ್ ನಲ್ಲಿ ನಡೆದ 1ನೇ ಪಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ನಲ್ಲಿ 65+ವಿಭಾಗದಲ್ಲಿ ಬಂಟ್ವಾಳದ ಗ್ಲೇಡಿಸ್ ಪಾಯ್ಸ್ ರವರು ಉದ್ದ ಜಿಗಿತ,ತ್ರಿವಿಧ ಜಿಗಿತ, 60ಮೀ, 200ಮೀ, ಮತ್ತು 800ಮೀ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಭಾಗವಹಿಸಬಹುದಾದ ಐದು ಸ್ಪರ್ದೆಗಳಲ್ಲಿಯು ಪ್ರಥಮ ಸ್ಥಾನವನ್ನು ಪಡೆದು ಉತ್ತಮ ಕ್ರೀಡಾಪಟು ವಾಗಿ ಗುರುತಿಸಿಕೊಂಡಿದ್ದಾರೆ
data-filename="Screenshot_2024_0526_191657.jpg" style="width: 268px;">









