ಬಂಟ್ವಾಳ :ಕೀರ್ತಿಶೇಷ ಕೊಡಮಣ್ಣ್ ಕಾಂತಪ್ಪ ಶೆಟ್ಟಿಯವರ ಪ್ರಥಮ ವರ್ಷದ ಸಂಸ್ಮರಣಾ ಕಾರ್ಯಕ್ರಮವು ಮೇ 26ರಂದು ಆದಿತ್ಯವಾರ ಕೊಡಮಣ್ಣ್ ಕಾಂತಪ್ಪ ಶೆಟ್ಟಿಯವರ ಸ್ವಗೃಹ 'ಪುಷ್ಪಾನುಗೃಹ'ದಲ್ಲಿ ನಡೆಯಿತು.
ಸಂಸ್ಮರಣಾ ಪುಸ್ತಕ "ಚೈತನ್ಯ" ಬಿಡುಗಡೆ ಮಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣವಾದಿ ಕಾರ್ಯಕರ್ತರಾಗಿ ಗ್ರಾಮಗಳ ವಿಕಾಸಕ್ಕಾಗಿ ದೀಕ್ಷೆ ತೆಗೆದು, ಮೌಲ್ಯಯುತ ಶಿಕ್ಷಣದ ಮೂಲಕ ಗ್ರಾಮದ ಅಭಿವೃದ್ಧಿ ಹಾಗೂ ಬದಲಾವಣೆಯನ್ನು ಧಾರ್ಮಿಕ ಕಾರ್ಯದ ಅಡಿಪಾಯದ ಮೂಲಕ ರಾಷ್ಟ್ರೀಯ ಚಿಂತನೆಯೊಂದಿಗೆ ದೇಶ ಕಟ್ಟುವ ಕಾರ್ಯ ಮಾಡಿದವರು ಕೊಡಮಣ್ಣು ಕಾಂತಪ್ಪ ಶೆಟ್ಟಿ,ಅನೇಕ ವರ್ಷ ಕಾರ್ಮಿಕರಿಗೆ ಶಕ್ತಿ ತುಂಬಿದರು, ರಾಜಕೀಯ ಕ್ಷೇತ್ರದ ಮೂಲಕ ಜನ ಸೇವೆ ಮಾಡಿ,ತಾಲೂಕು ಹಾಗೂ ಜಿಲ್ಲೆಗೆ ಆದರ್ಶ ಸಂಘ ಚಾಲಕನಾಗಿ ಕೆಲಸ ಮಾಡಿ ಸಮಾಜಕ್ಕೆ ಆದರ್ಶಪ್ರಾಯರಾದರು, ಅವರು ನಡೆದ ರೀತಿ, ಅವರ ಕಲ್ಪನೆಯ, ಚಿಂತನೆಯ ಮಾರ್ಗದಲ್ಲಿ ನಾವು ನಡೆಯುಬೇಕಿದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆ ಭಾ ಕಾರ್ಯಕಾರಿಣಿ ಆಹ್ವಾನಿತ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಂಸ್ಮರಣಾ ಸಂದೇಶ ನೀಡಿ, ಸ್ವಂತದ ಬಗ್ಗೆ ಅಸೆ ಇಲ್ಲದೆ ,ಕ್ಷಮಾ ಗುಣ ಹೊಂದಿದ ,ಅಹಂಕಾರವಿಲ್ಲದೆ ಎಲ್ಲರನ್ನು ಗೌರವಿಸಿ ಸಮಾಜದಲ್ಲಿ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡವರು ಕೊಡಮಣ್ಣು ಕಾಂತಪ್ಪ ಶೆಟ್ಟಿ, ಎಷ್ಟು ಕಾಲ ಬದುಕಿದರು ಎನ್ನುದಕ್ಕಿಂತ ಹೇಗೆ ಬದುಕಿದರು
ಎನ್ನುವುದು ಮುಖ್ಯ, ಗತಿಸಿದ ನಂತರ ತನ್ನ ನೆನಪು ಎಷ್ಟು ಕಾಲ ಇರುತ್ತದೆ ಎನ್ನುವುದು ಮುಖ್ಯ ಈ ಎಲ್ಲದಕ್ಕೆ ಅರ್ಹರು ಕಾಂತಪ್ಪ ಶೆಟ್ಟಿ.ಇವರ ಪ್ರೇರಣೆಯಿಂದ ಸಮಾಜಕ್ಕೆ ಸೇವೆ ಮಾಡಿದರೆ ಅದು ಕೊಡಮಣ್ಣು ಕಾಂತಪ್ಪ ಶೆಟ್ಟರಿಗೆ ಸಲ್ಲಿಸುವ ನಿಜವಾದ ಸಲ್ಲಿಸುವ ಶ್ರದ್ದಾಂಜಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಯಶವಂತ ಮೂಲ್ಕಿ ಮಂಗಳೂರು ಗ್ರಾಮಾಂತರ ಜಿಲ್ಲಾ ಮಾನ್ಯ ಸಂಘ ಚಾಲಕರು, ಸಂಸ್ಮರಣಾ ಪುಸ್ತಕ "ಚೈತನ್ಯ"ದ ಸಂಪಾದಕ ಕೆ ಅರ್ ದೇವದಾಸ್ ಕೊಡ್ಮಾಣ್ ಮೇರಾಮಜಲು ಗ್ರಾ ಪಂ ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾಣ್ ಕೊಡಿ,ಕೊಡಮಣ್ಣು ಕಾಂತಪ್ಪ ಶೆಟ್ಟಿಯವರ ಧರ್ಮಪತ್ನಿ ಸುಲೋಚನಾ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು, ಕೊಡ್ಮಾಣ್ ನಲ್ಲಿ ಹಿಂದೂ ರುದ್ರಭೂಮಿ ಲೋಕಾರ್ಪಣೆ, ಗ್ರಾಮ ವಿಕಾಸ ಅಬ್ಬೆಟ್ಟು ಮೇರಮಜಲು ಗ್ರಾಮದ ವತಿಯಿಂದ ತುರ್ತು ವಾಹನ "ಆಂಬುಲೆನ್ಸ್"ಸೇವೆ ಲೋಕಾರ್ಪಣೆ ಹಾಗೂ ಮದಕ – ಕೊಡಮಣ್ ರಸ್ತೆಗೆ ಕಾಂತಪ್ಪ ಶೆಟ್ಟಿ ನಾಮಫಲಕದ ಅನಾವರಣ ಮಾಡಲಾಯಿತು. ಕಾರ್ಯಕ್ರಮದ ಬಳಿಕ ಮದ್ಯಾಹ್ನ ಸಹಭೋಜನ ನಡೆಯಿತು
ದಾಮೋದರ ನೆತ್ತರಕೆರೆ ಪ್ರಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಗೋಪಾಲ ಗೋವಿಂತೋಟ ಧನ್ಯವಾದವಿತ್ತರು, ಪ್ರೊ.ಚೇತನ್ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.









