ಬಂಟ್ವಾಳ: ಕುಲಾಲ ಸುಧಾರಕ ಸಂಘ ಫರಂಗಿಪೇಟೆ ಇದರ ಅಶ್ರಯದಲ್ಲಿ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ವಿತರಣೆ ಹಾಗೂ ಪೂರ್ವ ಸಿದ್ದತಾ ಸಭೆಯು ಬ್ರಹ್ಮಕಲಶೋತ್ಸವದ ಗೌರವಧ್ಯಕ್ಷರು ಹಾಗೂ ಜಿಲ್ಲಾ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ರ ಉಪಸ್ಥಿತಿಯಲ್ಲಿ ಏ 25ರಂದು ಮಂಗಳವಾರ ಕುಲಾಲ ಸಭಾ ಭವನ ನಾಣ್ಯ ಮಾರಿಪಲ್ಲದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಸಿರುವಾಣಿ ಹೊರೆ ಕಾಣಿಕೆಯ ಪೂರ್ವ ತಯಾರಿಯ ಬಗ್ಗೆ ಸಭೆ ನಡೆಸಿ ಅದ್ದೂರಿ ಹೊರ ಕಾಣಿಕೆಯ ಮೆರವಣಿಗೆಯ ರೂಪರೇಷೆಗಳ ಬಗ್ಗೆ ಮಾತೃ ಸಂಘದ ಅಧ್ಯಕ್ಷರ ಜೊತೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಹೊರಕಾಣಿಕೆ ಸಮಿತಿ ಸಂಚಾಲಕರಾದ, ಕಿರಣ್ ಅಟ್ಲುರು ಹಾಗೂ ಪ್ರಚಾರ ಸಮಿತಿಯ ಸಂಚಾಲಕರು ಪ್ರದೀಪ್ ಅತ್ತಾವರ ಹಾಗೂ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ
ಸದಾಶಿವ ಕುಲಾಲ್, ಫರಂಗಿಪೇಟೆ ಕುಲಾಲ ಸಂಘದ ಅಧ್ಯಕ್ಷರಾದ ನಾರಾಯಣ ಕುಲಾಲ್, ಕಾರ್ಯದರ್ಶಿ ವಿಶ್ವನಾಥ್ ಕುಲಾಲ್, ಮಾತೃ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯೆ ಉಮಾ ಚಂದ್ರಶೇಖರ್, ಮಾತೃ ಸಂಘದ ಫರಂಗಿಪೇಟೆ ಪ್ರತಿನಿಧಿ ಜಯರಾಮ್ ಕುಲಾಲ್, ಫರಂಗಿಪೇಟೆ ಕುಲಾಲ ಸಂಘದ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.















