Coastal Bulletin

ಬಂಟ್ವಾಳ :ರಾಜೇಶ್ ನಾಯಕ್ ಬಂಟ್ವಾಳದಲ್ಲಿ ಶಾಸಕರಾದ ಮೇಲೆ ಶಾಂತಿ ಸುವ್ಯವಸ್ಥೆ ನೆಲೆಸಿದ್ದು ಎಲ್ಲೋ ಕಾನೂನು ವ್ಯವಸ್ಥೆ ಹದಗೆಟ್ಟಿಲ್ಲ, 2ಸಾವಿರಕ್ಕೋ ಅಧಿಕ ಅನುದಾನದ ಮೂಲಕ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ನಡೆದಿದೆ . ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ರನ್ನು ಗೆಲ್ಲಿಸುವುದು ಅವಶ್ಯಕ ಎಂದು ಕೇರಳ ರಾಜ್ಯ ಬಿಜೆಪಿ ಖಜಾಂಚಿ ಕೃಷ್ಣದಾಸ್ ಹೇಳಿದರು.

ಬಂಟ್ವಾಳದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರು ಭಯೋತ್ಪಾದನೆಯನ್ನು ಬೆಂಬಲಿಸುವ ಇಮ್ರಾನ್ ಪ್ರತಾಪ್ ರೆಡ್ಡಿ ಅಂತವರು ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಾಗಿದ್ದಾರೆ, ಎಸ್ ಡಿ ಪಿ ಐ ಪಕ್ಷ ಯಾರ ಅಂಗ ಸಂಸ್ಥೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ, ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರವನ್ನು ಎಸ್‌ಡಿಪಿಐ ಬೆಂಬಲದೊಂದಿಗೆ ನಡೆಸುತ್ತಿದೆ ಇದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದರು.ಭೀತಿವಾದಿಗಳನ್ನು ಬೆಂಬಲಿಸುವವರ ಸಹಾಯ ಪಡೆಯುವ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕಿದೆ ಎಂದರು.

 ಬಂಟ್ವಾಳ ಕ್ಷೇತ್ರ ದೇವಪ್ಪ ಪೂಜಾರಿ ಮಾತನಾಡಿ, ಚುನಾವಣಾ ದೃಷ್ಟಿಯಿಂದ ಸಾಕಷ್ಟು ಕಾರ್ಯಕ್ರಮ

ಜೋಡಿಸಲಾಗಿದ್ದು ಏಪ್ರಿಲ್ 26ರ ಸಿದ್ದಕಟ್ಟೆಯಲ್ಲಿ ರೋಡ್ ಶೋ 27ರಂದು ಪ್ರಧಾನಿ ಭಾಷಣ 30ರಂದು ಮಹಾ ಅಭಿಯಾನ ಮೂಲಕ ಬೂತ್ ಮಟ್ಟದಲ್ಲಿ ಮನೆ ಮನೆ ಸಂಪರ್ಕ ನಡೆಯಲಿದೆ ಎಂದರು.

ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ , ಕೇರಳ ಮುಖಂಡ ಹರಿದಾಸ್, ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್,ಚುನಾವಣಾ ಪ್ರಮುಖರಾದ ದೇವದಾಸ್ ಶೆಟ್ಟಿ, ವಿಸ್ತಾರಕ್ ನವೀನ್ ಕುಮಾರ್ ಅಯೋಧ್ಯ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೋಂಬಯ್ಯ ಅರಳ,ರವೀಶ್ ಶೆಟ್ಟಿ ಕರ್ಕಳ, ಕಾರ್ಯದರ್ಶಿ ಪುರುಷೋತ್ತಮ್ ಶೆಟ್ಟಿ ವಾಮದಪದವು,ಮಾಧ್ಯಮ ಪ್ರಮುಖರಾದ ರಂಜಿತ್ ಮೈರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment