ಬಂಟ್ವಾಳ: ಪೋಲಿಯೋ ಮುಕ್ತ ಭಾರತ ನಿರ್ಮಿಸುವ ಸಲುವಾಗಿ (1-5 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವು ಬಂಟ್ವಾಳ ತಾಲೂಕಿನ ಎಲ್ಲಾ 21 ಪ್ರಾಥಮಿಕಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಫೆ.27 ರಂದು ಜರುಗಲಿದೆ.
ಬಂಟ್ವಾಳದ ತಾಲೂಕು ಆಸ್ಪತ್ರೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಪೋಲಿಯೋ ಅಭಿಯಾನ ವನ್ನು ಉದ್ಘಾಟಿಸುವರು.
ತಾಲೂಕಿನ 1-5 ವರ್ಷದ ಸುಮಾರು 30640 ಮಕ್ಕಳಿಗೆ ಲಸಿಕೆ ನೀಡುವ ಗುರಿಯಿದ್ದು ಇದಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳು ಸೇರಿ 190
ಬೂತುಗಳ ವ್ಯವಸ್ಥೆ
ಮಾಡಲಾಗಿದೆ. ಈ ಉದ್ದೇಶಕ್ಕೆ 784 ಸ್ವಯಂ ಸೇವಕರ 392
ತಂಡಗಳನ್ನು ನಿಯೋಜಿಸಲಾಗಿದೆ. 39 ಮೇಲ್ವಿಚಾರಕರನ್ನು ನೇಮಿಸಲಾಗಿದೆ.
ಪೋಷಕರು ತಮ್ಮ 0-5 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ತಮ್ಮ ಹತ್ತಿರದ ಪೋಲಿಯೋ ಬೂತುಗಳಿಗೆ ಕರೆದುಕೊಂಡು ಹೋಗಿ ಲಸಿಕೆಯನ್ನು ಹಾಕಿಸಬೇಕಾಗಿ ಬಂಟ್ವಾಳ ತಾಲೂಕು ಅರೋಗ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.













