ನವದೆಹಲಿ, ಫೆಬ್ರವರಿ 26: ದೇಶದ ಪ್ರಮುಖ ನಗರಗಳಲ್ಲಿ ಮೊನ್ನೆಯಿಂದ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಈಗ ಸ್ವಲ್ಪ ಇಳಿಕೆಯಾಗಿದೆ. ಫೆಬ್ರವರಿ 26 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500ರೂ, ಇಳಿಕೆ ಆಗಿ, 46,350ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 540ರೂ.ಇಳಿಕೆ ಕಂಡಿದ್ದು, , ಪ್ರಸ್ತುತ 50,570ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಸ್ಥಿರ ಆಗಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 65,000 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,350 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,570 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,350ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,570 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,350 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,570 ರೂ. ಇದೆ. ಚೆನ್ನೈನಲ್ಲಿ47,380 ರೂ. ಹಾಗೂ
ಅಪರಂಜಿ 51,700ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,350 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ50,570 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.













