ಸುಜೀರು: ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವ. ಸಾಮೂಹಿಕ ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಸಭೆ.

Coastal Bulletin
ಸುಜೀರು: ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವ. ಸಾಮೂಹಿಕ ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಸಭೆ.

ಬಂಟ್ವಾಳ :ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಸುಜೀರು, ಪುದು, ಬಂಟ್ವಾಳ ತಾಲೂಕು ಇಲ್ಲಿ ಶ್ರೀ ದೈವರಾಜ ಕೋರ್ದಬ್ಬು ಮತ್ತು ಪರಿವಾರ ದೈವಗಳಿಗೆ ವರ್ಷಾವಧಿ ನೇಮೋತ್ಸವ ಡಿ.28ನೇ ಶನಿವಾರ ಹಾಗೂ ಡಿ.29ನೇ ಆದಿತ್ಯವಾರ ನಡೆಯಲಿದೆ.

ಕಾರ್ಯಕ್ರಮಗಳು:

ಡಿ.27ನೇ ಶುಕ್ರವಾರ ಸಂಜೆ ಗಂಟೆ 6-00ಕ್ಕೆ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ವಾಸ್ತು ಪೂಜೆ, ವಾಸ್ತು ಹೋಮ, ದಿಕ್ಷಾಲಕ ಬಲಿ.

ಡಿ.28ನೇ ಶನಿವಾರ ಬೆಳಿಗ್ಗೆ ಗಂಟೆ 7-30ಕ್ಕೆ ಗಣಹೋಮ, 8-30ಕ್ಕೆ ಭಂಡಾರ ಏರುವುದು,9-30ಕ್ಕೆ ಸುಬೀರು ವೇದಮೂರ್ತಿ ಶ್ರೀ ಗಣೇಶ್ ಭಟ್ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ,11-00ಕ್ಕೆ ಮಹಾಪೂಜೆ, ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ

ಸಭಾಪತಿ ಯು. ಟಿ. ಖಾದರ್ ಸಹಿತ ಅನೇಕ ಗಣ್ಯರು ಭಾಗವಹಿಸುವರು. ಮಧ್ಯಾಹ್ನ ಗಂಟೆ 1-00ಕ್ಕೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 10-00ರಿಂದ ಶ್ರೀ ದೈವರಾಜ ಕೋರ್ದಬ್ಬು ತನ್ನಿಮಾನಿಗ ದೈವಕ್ಕೆ ನೇಮೋತ್ಸವ ಜರುಗಲಿದೆ.

ಡಿ 29ನೇ ಆದಿತ್ಯವಾರ ಸಂಜೆ ಗಂಟೆ 5-00ರಿಂದ ರಾಹು ಗುಳಿಗ ದೈವಗಳಿಗೆ ನೇಮ,ರಾತ್ರಿ ಗಂಟೆ 9-00ರಿಂದ ಗುಳಿಗ ಪಂಜುರ್ಲಿ ದೈವಗಳಿಗೆ ನೇಮ ನಡೆಯಲಿದೆ.

Leave a Comment