'ಪೊಳಲಿ ಯಕ್ಸೋತ್ಸವ' ಪ್ರಶಸ್ತಿಗೆ ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಆಯ್ಕೆ.

Coastal Bulletin
'ಪೊಳಲಿ ಯಕ್ಸೋತ್ಸವ' ಪ್ರಶಸ್ತಿಗೆ ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಆಯ್ಕೆ.

ಬಂಟ್ವಾಳ :ಯಕ್ಷಗಾನ ರಂಗದಲ್ಲಿ ಕಳೆದ 30 ವರ್ಷಗಳಿಂದ ಕಲಾ ಸೇವೆ ಸಲ್ಲಿಸುತ್ತಿರುವ ಯಕ್ಷ ಕಲಾ ಪೊಳಲಿ ಸಂಸ್ಥೆಯು ತನ್ನ 30ನೇ ವರ್ಧಂತ್ಯುತ್ಸವದ ಸಂದರ್ಭದಲ್ಲಿ ವರ್ಷಂಪ್ರತಿಯಂತೆ ನೀಡುವ 'ಪೊಳಲಿ ಯಕ್ಸೋತ್ಸವ' ಪ್ರಶಸ್ತಿಗೆ ಈ ಬಾರಿ ಖ್ಯಾತ ಹೃದ್ರೋಗ ತಜ್ಞ ಯಕ್ಷ ಕಲಾಪೋಷಕ ಡಾ| ಪದ್ಮನಾಭ ಕಾಮತ್ ಅವರನ್ನು ಆಯ್ಕೆ ಮಾಡಿದೆ ಎಂದು ಯಕ್ಷಕಲಾ ಪೊಳಲಿಯ ಸಂಚಾಲಕ ವೆಂಕಟೇಶ್ ನಾವಡ ಪೊಳಲಿ ತಿಳಿಸಿದ್ದಾರೆ.

ಸೆ. 27ರಂದು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸನ್ನಿಧಿಯಲ್ಲಿ

ನಡೆಯುವ ಪೊಳಲಿ ಯಕ್ಸೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ

Leave a Comment