ಬಂಟ್ವಾಳ:ನಾರಾಯಣಗುರುಗಳು ದೇವಾಲಯ ನಿರ್ಮಿಸಿದಷ್ಟೇ ವಿದ್ಯಾಲಯಗಳ ಸ್ಥಾಪನೆಗೆ ಸಮಾನವಾಗಿ ಒತ್ತು ನೀಡಿದ್ದರು. ಆಧ್ಯಾತ್ಮಿಕ ಬೆಳವಣಿಗೆಗೆ ದೇವಾಲಯ ಎಷ್ಟು ಅಗತ್ಯವೋ, ಬೌದ್ಧಿಕ ಮತ್ತು ಸಾಮಾಜಿಕ ಉನ್ನತಿಗೆ ವಿದ್ಯಾಭ್ಯಾಸವೂ ಅಷ್ಟೇ ಅಗತ್ಯವೆಂದು ಅವರು ಪ್ರತಿಪಾದಿಸಿದ್ದರು ಎಂದು ಭಜಕರು ಮತ್ತು ಸಂಗೀತವಾದಕರಾದ ರಾಜೇಶ್ ಅಮ್ಟೂರು ತಿಳಿಸಿದರು.
ಅವರು ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕುಮ್ಡೇಲ್ ಸೀತಾ ರಾಜೇಶ್ ಕೋಟ್ಯಾನ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಭಜನಾ ಸಂಕೀರ್ತನೆ 53 ರಲ್ಲಿ ಗುರುಸಂದೇಶ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್ ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ, ನಿಕೇಶ್ ಕೋಟ್ಯಾನ್ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ, ಮಹೇಶ್ ಬೊಳ್ಳಾಯಿ, ಸಂಘಟನಾ ಕಾರ್ಯದರ್ಶಿ ಸಚಿನ್ ಕೊಡ್ಮಾನ್, ಸದಸ್ಯರಾದ ಪ್ರಶಾಂತ್
ಅಮೀನ್, ನಾಗೇಶ್ ಪೂಜಾರಿ ಏಲಾಬೆ ಯತೀಶ್ ಬೊಳ್ಳಾಯಿ, ಸೂರಜ್ ತುಂಬೆ, ಪ್ರಶಾಂತ್ ಕೋಟ್ಯಾನ್, ಸುದೀಪ್ ರಾಯಿ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ, ನಾಗೇಶ್ ಪೊನ್ನೋಡಿ, ಶಿವಾನಂದ ಎo ,ಅರುಣ್ ಕುಮಾರ್, ಹರೀಶ್ ಕೋಟ್ಯಾನ್ ಕುದನೆ, ರಾಜೇಶ್ ಸುವರ್ಣ ಉಪಸ್ಥಿತರಿದ್ದರು
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸ್ವಾಗತಿಸಿದರು. ಭಜನಾ ಸಂಕೀರ್ತನೆಯ ಸಂಗೀತದಲ್ಲಿ ರಾಜೇಶ್ ಅಮ್ಟೂರು, ಸಾತ್ವಿಕ್ ದೇರಾಜೆ , ವಿನಯ ಆಚಾರ್ಯ ಸಹಕರಿಸಿದರು ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ಧನ್ಯವಾದ ನೀಡಿದರು.














