Coastal Bulletin

ಬಂಟ್ವಾಳ:ಪ್ರಾಕೃತಿ ವಿಕೋಪದಿಂದ ಬಂಟ್ವಾಳ ತಾಲೂಕಿನಲ್ಲಿ ಹಾನಿಗೀಡಾಗಿದ್ದ ಮನೆಗಳಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಪಂಜಿಕಲ್ಲು ಗ್ರಾಮದ ಮುಕುಡದಲ್ಲಿ ಭೂಕುಸಿತವುಂಟಾಗಿ ಮೂವರು ಮೃತಪಟ್ಟ ಸ್ಥಳಕ್ಕು ಭೇಟಿ ನೀಡಿದ ವೀರಪ್ಪ ಮೊಯ್ಲಿ ಅವರು ಮನೆಮಾಲಕಿಯವರಲ್ಲಿ ಮಾಹಿತಿ ಪಡೆದರು. ಬಳಿಕ ಅವರು ಅರಳ ಗ್ರಾಮದಲ್ಲಿ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಪೂರಕ ಮಾಹಿತಿ ನೀಡಿದರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್,ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ

ಕುಂದರ್, ಸುದೀಪ್ ಕುಮಾರ್ ಶೆಟ್ಟಿ,ಪಕ್ಷದ ಪ್ರಮುಖರಾದ ಸುದರ್ಶನ್ ಜೈನ್, ಜಗದೀಶ್ ಕೊಯಿಲ,ಸುರೇಶ್ ಪೂಜಾರಿ ಜೋರ,ದೇವಪ್ಪ ಕುಲಾಲ್, ರಾಜೇಶ್ ಗೌಡ, ಪ್ರವೀಣ್, ಚೇತನ್, ಮೋನಪ್ಪ ಆಚಾರಿ, ಪ್ರವೀಣ್ ಕೊಂಬರಬೈಲು, ಗಿರಿಯಪ್ಪ, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Comment