ಬಂಟ್ವಾಳ :ಲಯನ್ಸ್ ಕ್ಲಬ್ ಬಂಟ್ವಾಳದ ವರ್ಷದ ಕೊನೆಯ ಸಭೆ "ವಂದನಾರ್ಪಣೆ" ಕಾರ್ಯಕ್ರಮವು ಇತ್ತೀಚಿಗೆ ಲಯನ್ಸ್ ಸೇವಾ ಮಂದಿರದಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಆರಂಭದಲ್ಲಿ ಕ್ಲಬ್ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ ರವರು ವರ್ಷದ ಒಟ್ಟು ಚಟುವಟಿಕೆಗಳ ವಿವರಗಳನ್ನು ಸಭೆಯ ಮುಂದಿಟ್ಟು, ನಂತರ ವರ್ಷದ ಪ್ರತೀ ಕಾರ್ಯಕ್ರಮಗಳಿಗೆ ಸಹಕರಿಸಿದ, ಬೆಂಬಲಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತಾಪೂರ್ವಕವಕವಾಗಿ ಮನದಾಳದ ಮಾತುಗಳೊಂದಿಗೆ ಗೌರವಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷರಾದ ಲಯನ್ ಡಾ.ಬಿ. ವಸಂತ ಬಾಳಿಗಾ ಮತ್ತು ಪೂರ್ವ ರಾಜ್ಯಪಾಲರಾದ ಮತ್ತು ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ಲಯನ್ ವಸಂತ ಕುಮಾರ್ ಶೆಟ್ಟಿಯವರು
ಅತಿಥಿಗಳಾಗಿ ಬಾಗವಹಿಸಿದ್ದು, ವರ್ಷದ ಚಟುವಟಿಕೆ ಮತ್ತು ಸದಸ್ಯರೆಲ್ಲರ ಬಗೆಗಿನ ಅಧ್ಯಕ್ಷರ ಮನದಾಳದ ಮಾತುಗಳನ್ನೊಳಗೊಂಡ "ಮೆಲುಕು" ಸಂಚಿಕೆ ಬಿಡುಗಡೆ ಗೊಳಿಸಿ, ಸಂಸ್ಥೆಯ ಬಗ್ಗೆ ಮಾತನಾಡುತ್ತಾ ವರ್ಷದ ಕಾರ್ಯಚಟುವಟಿಕೆಗಳನ್ನು ಶ್ಲ್ಯಾಘಿಸಿದರು.















